Select Your Language

Notifications

webdunia
webdunia
webdunia
webdunia

ನಟಿ ಪೂಜಾ ಹೆಗ್ಡೆಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ ಹುಡುಗ

ನಟಿ ಪೂಜಾ ಹೆಗ್ಡೆಗೆ ಕನ್ನಡದಲ್ಲಿ ಪ್ರಪೋಸ್ ಮಾಡಿದ ಹುಡುಗ
ಹೈದರಾಬಾದ್ , ಶುಕ್ರವಾರ, 18 ಫೆಬ್ರವರಿ 2022 (09:40 IST)
ಹೈದರಾಬಾದ್: ಅಲವೈಕುಂಠಪುರಮುಲೊ ಸಿನಿಮಾ ಮೂಲಕ ಯುವ ಜನಾಂಗದ ಮನಸ್ಸು ಕದ್ದಿದ್ದ ಚೆಲುವೆ ಪೂಜಾ ಹೆಗ್ಡೆಗೆ ಅಭಿಮಾನಿ ಹುಡುಗ ಕನ್ನಡದಲ್ಲಿ ಪ್ರಪೋಸ್ ಮಾಡಿದ್ದಾನೆ.

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಪೂಜಾ ಅತಿಥಿಯಾಗಿ ಈ ವಾರ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಪೂಜಾಗಾಗಿ ಹಾಡು ಹಾಡಿ ಸ್ಪರ್ಧಿಯೊಬ್ಬರು ಕನ್ನಡದಲ್ಲೇ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

‘ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಕನ್ನಡದಲ್ಲೇ ಹೇಳಿ ಸ್ಪರ್ಧಿ ಪೂಜಾ ಮನ ಗೆಲ್ಲುತ್ತಾನೆ. ಈ ಪ್ರೋಮೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೇ ಫೆಬ್ರವರಿ 20 ರಂದು ಭಾನುವಾರ ಸಂಜೆ 6 ಗಂಟೆಯಿಂದ ಕಾರ್ಯಕ್ರಮ ಪ್ರಸಾರವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಕರ್ ಅನುಶ್ರೀ ಕಡೆಯಿಂದ ಹೊಸ ಸುದ್ದಿ