Publish Date: Fri, 18 Feb 2022 (08:50 IST)
Updated Date: Fri, 18 Feb 2022 (09:06 IST)
ಬೆಂಗಳೂರು: ಇಂದು ಮತ್ತೊಂದು ಶುಕ್ರವಾರ. ಗಾಂಧಿನಗರದಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುವ ದಿನ. ಇಂದು ಯುವ ಮನಸ್ಸುಗಳಿಗೆ ಇಷ್ಟವಾಗುವಂತಹ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿದೆ.
ಧನ್ವೀರ್ ಗೌಡ, ಶ್ರೀಲೀಲಾ ಜೋಡಿಯಾಗಿ ನಟಿಸಿರುವ ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿದೆ. ಈ ಜೋಡಿ ಚಿತ್ರ ರಸಿಕರಿಗೆ ಮೋಡಿ ಮಾಡಬಹುದು ಎಂಬ ವಿಶ್ವಾಸ ಚಿತ್ರತಂಡದ್ದು. ಈಗಾಗಲೇ ಕಲರ್ ಫುಲ್ ಪ್ರಿರಿಲೀಸ್ ಈವೆಂಟ್ ಮಾಡಿ ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾಗಿದೆ.
ಇನ್ನು, ಆಕ್ಷನ್ ಸಿನಿಮಾ ಪ್ರಿಯರಿಗಾಗಿ ವಿನೋದ್ ಪ್ರಭಾಕರ್ ನಾಯಕರಾಗಿರುವ ವರದ ಸಿನಿಮಾ ಕೂಡಾ ಇಂದೇ ಬಿಡುಗಡೆಯಾಗಿದೆ. ಉದಯ್ ಪ್ರಕಾಶ‍್ ನಿರ್ಮಿಸಿ, ನಿರ್ದೇಶಿಸಿರುವ ಈ ಸಿನಿಮಾದಲ್ಲಿ ವಿನೋದ್ ಗೆ ನಾಯಕಿಯಾಗಿ ಅಮಿತಾ ಅಭಿನಯಿಸಿದ್ದಾರೆ.