Publish Date: Thu, 17 Feb 2022 (09:00 IST)
Updated Date: Thu, 17 Feb 2022 (09:25 IST)
ಚೆನ್ನೈ: ಚೆನ್ನೈ ಪ್ರವಾಸದಲ್ಲಿರುವ ನಟ ಶಿವರಾಜ್ ಕುಮಾರ್ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದಾರೆ.
ಮೊನ್ನೆಯಷ್ಟೇ ಶಿವಣ್ಣ ದಂಪತಿ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು. ಪುನೀತ್ ನಿಧನದ ವೇಳೆ ಸಂತಾಪ ಸೂಚಿಸಿದ್ದಕ್ಕೆ ತಮಿಳುನಾಡು ಸಿಎಂಗೆ ಧನ್ಯವಾದ ಸಲ್ಲಿಸಿದ್ದರು.
ಇದೀಗ ಚೆನ್ನೈನ ಉಪರಾಷ್ಟ್ರಪತಿ ನಿವಾಸದಲ್ಲಿ ವೆಂಕಯ್ಯನಾಯ್ಡು ಅವರನ್ನು ಭೇಟಿಯಾಗಿದ್ದಾರೆ. ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು ಎನ್ನಲಾಗಿದೆ.