Select Your Language

Notifications

webdunia
webdunia
webdunia
Wednesday, 16 April 2025
webdunia

ದರ್ಶನ್ ಜೊತೆಗೆ ಸ್ಯಾಂಡಲ್ ವುಡ್ ನ ಹಲವು ತಾರೆಯರಿಗೆ ಇಂದೇ ಜನ್ಮದಿನ

ದರ್ಶನ್
ಬೆಂಗಳೂರು , ಬುಧವಾರ, 16 ಫೆಬ್ರವರಿ 2022 (09:49 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಜನ್ಮದಿನ. ಕಾಕತಾಳೀಯವೆಂಬಂತೆ ಸ್ಯಾಂಡಲ್ ವುಡ್ ನ ಅನೇಕ ತಾರೆಯರಿಗೆ ಇಂದೇ ಜನ್ಮದಿನ. ಅವರು ಯಾರೆಂದು ನೋಡೋಣ.

ಕಿರುತೆರೆಯ ಸೂಪರ್ ಸ್ಟಾರ್ ಅನಿರುದ್ಧ್ ಜತ್ಕಾರ್: ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಆಗಿರುವ ಸ್ಯಾಂಡಲ್ ವುಡ್ ನಟ ಅನಿರುದ್ಧ್ ಜತ್ಕಾರ್ ಗೆ ಇಂದು ಜನ್ಮದಿನ. ಆದರೆ ಅವರೂ ಕೂಡಾ ಪುನೀತ್ ರಾಜ್ ಕುಮಾರ್ ಅಕಾಲಿಕ ಅಗಲುವಿಕೆಯ ನೋವಿಗೆ ಸಂತಾಪ ಸೂಚಕವಾಗಿ ಇಂದು ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿಲ್ಲ. ಆರ್ಯವರ್ಧನ್ ಪಾತ್ರದ ಮೂಲಕ ಮಿಂಚುತ್ತಿರುವ ಅನಿರುದ್ಧ್ ಗೆ ಅಭಿಮಾನಿಗಳು ವಿಶೇಷ ಸಿಡಿಪಿ ಬಿಡುಗಡೆ ಮಾಡುವ ಮೂಲಕ ವಿಶ್ ಮಾಡಿದ್ದಾರೆ.

ನಿಧಿ ಸುಬ್ಬಯ್ಯ: ಸ್ಯಾಂಡಲ್ ವುಡ್ ನ ಗ್ಲಾಮರಸ್ ನಟಿ ಎನಿಸಿಕೊಂಡಿರುವ ನಿಧಿ ಸುಬ್ಬಯ್ಯ ಕೂಡಾ ಇಂದೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಇತ್ತೀಚೆಗೆ ಬಿಗ್ ಬಾಸ್ ಆವೃತ್ತಿಯಲ್ಲೂ ಕಾಣಿಸಿಕೊಂಡಿದ್ದರಿಂದ ನಿಧಿಗೆ ಕಿರುತೆರೆಯಲ್ಲೂ ಅಭಿಮಾನಿಗಳಿದ್ದಾರೆ. ಅವರೂ ಸರಳವಾಗಿ ತಮ್ಮ ಸ್ನೇಹಿತರ ಜೊತೆ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದಾರೆ.

ಕಿರುತೆರೆಯ ಮನೆ ಮಗಳು ರಶ್ಮಿ ಪ್ರಭಾಕರ್: ಲಕ್ಷ್ಮಿ ಬಾರಮ್ಮಾ ಧಾರವಾಹಿಯ ಚಿನ್ನು ಪಾತ್ರದ ಮೂಲಕ ಮನೆ ಮನೆಗೂ ಪರಿಚಿತರಾದ ನಟಿ ರಶ್ಮಿ ಪ್ರಭಾಕರ್ ಗೆ ಇಂದು ಜನ್ಮದಿನ. ಇತ್ತೀಚೆಗೆ ತಾವು ಪ್ರೀತಿಸಿದ ಹುಡುಗನ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿಗೆ ಈ ಬಾರಿಯ ಬರ್ತ್ ಡೇ ಈ ಕಾರಣಕ್ಕೆ ಸ್ಪೆಷಲ್ ಆಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಕಿರುತೆರೆಯಲ್ಲೂ ನಟಿಸುತ್ತಿರುವ ನಟಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ.

ಮಲಯಾಳಿ ಬೆಡಗಿ ಮೀರಾ ಜಾಸ್ಮಿನ್: ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಜೊತೆ ಕನ್ನಡ ಸಿನಿಮಾಗಳ ನಟಿಸಿದ್ದ ಮಲಯಾಳಿ ಬೆಡಗಿ ಮೀರಾ ಜಾಸ್ಮಿನ್ ಗೂ ಇಂದೇ ಜನ್ಮದಿನ. ಸದ್ಯಕ್ಕೆ ಮೀರಾ ಚಿತ್ರರಂಗದಿಂದ ಕೊಂಚ ದೂರವೇ ಇದ್ದರೂ ಅಭಿಮಾನಿಗಳು ಮಾತ್ರ ಆಕೆಯ ಜನ್ಮದಿನಕ್ಕೆ ತಪ್ಪದೇ ವಿಶ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಕ ಬಪ್ಪಿ ಲಹರಿ ಇನ್ನಿಲ್ಲ