Publish Date: Sat, 12 Feb 2022 (17:27 IST)
Updated Date: Sat, 12 Feb 2022 (17:29 IST)
ಬೆಂಗಳೂರು: ಫೆಬ್ರವರಿ 16 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ದಿಡೀರ್ ವಿಡಿಯೋ ಪ್ರಕಟಿಸಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ಈ ಬಾರಿಯೂ ಕೊರೋನಾ ಮತ್ತು ಪುನೀತ್ ರಾಜ್ ಕುಮಾರ್ ಅಗಲುವಿಕೆಯ ನೋವಿನ ಕಾರಣಕ್ಕೆ ಅದ್ಧೂರಿ ಬರ್ತ್ ಡೇ ಆಚರಣೆ ಇಲ್ಲ ಎಂದು ದರ್ಶನ್ ಹೇಳಿದ್ದು, ಈ ದಿನ ನಾನು ಮನೆಯಲ್ಲಿರಲ್ಲ. ಹಾಗಾಗಿ ಯಾರೂ ದೂರದ ಊರುಗಳಿಂದ ಮನೆ ಹತ್ರ ಬರಬೇಡಿ ಎಂದಿದ್ದಾರೆ.
ಹಾಗಿದ್ದರೂ ತಮ್ಮ ಮೆಚ್ಚಿನ ಅಭಿಮಾನಿಗಳಿಗೆ ನಿರಾಸೆ ಮಾಡಲ್ಲ ಎಂದಿರುವ ದರ್ಶನ್ ಈ ದಿನ ತಮ್ಮ ಕ್ರಾಂತಿ ಸಿನಿಮಾದ ಬಗ್ಗೆ ಅಪ್ ಡೇಟ್ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಅದೇ ದಿನ ತಮ್ಮ ಹೊಸ ಸಿನಿಮಾ ಸೆಟ್ಟೇರಲಿದೆ ಎಂದಿದ್ದಾರೆ. ಇದಲ್ಲದೆ, ಫೆಬ್ರವರಿ 18 ರಂದು ತಾವು ನಾಯಕರಾಗಿ ನಟಿಸಿದ್ದ ಮೊದಲ ಸಿನಿಮಾ ಮೆಜೆಸ್ಟಿಕ್ ಥಿಯೇಟರ್ ನಲ್ಲಿ ಮರು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ನನ್ನ ಕಡೆಯಿಂದ ಇದು ಸಣ್ಣ ಉಡುಗೊರೆ. ದಯವಿಟ್ಟು ಸಹಕರಿಸಿ ಎಂದು ದರ್ಶನ್ ಮನವಿ ಮಾಡಿದ್ದಾರೆ.