Select Your Language

Notifications

webdunia
webdunia
webdunia
webdunia

ಟಿಆರ್ ಪಿಗಾಗಿ ಮೇಘನಾ ಸರ್ಜಾರನ್ನು ಅಳಿಸ್ತೀರಾ? ಫ್ಯಾನ್ಸ್ ಗರಂ

ಟಿಆರ್ ಪಿಗಾಗಿ ಮೇಘನಾ ಸರ್ಜಾರನ್ನು ಅಳಿಸ್ತೀರಾ? ಫ್ಯಾನ್ಸ್ ಗರಂ
ಬೆಂಗಳೂರು , ಶನಿವಾರ, 12 ಫೆಬ್ರವರಿ 2022 (09:50 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ರಿಯಾಲಿಟಿ ಶೋ ಬಗ್ಗೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಕಾರಣ ಶೋ ನಿರ್ಮಾಪಕ ಸೃಜನ್ ಲೋಕೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತೀರ್ಪುಗಾರರಲ್ಲೊಬ್ಬರಾದ ಮೇಘನಾ ರಾಜ್‍ ಪತಿ ಚಿರು ನೆನಪಲ್ಲಿ ಕಣ್ಣೀರು ಹಾಕುವ ದೃಶ್ಯವನ್ನು ಪ್ರಕಟಿಸಿದ್ದು. ಚಿರು ಮೊದಲನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಕೊಟ್ಟ ಉಡುಗೊರೆ ಮತ್ತು ಚಿರು ಧ್ವನಿಯನ್ನು ಕಾರ್ಯಕ್ರಮದಲ್ಲಿ ಕೇಳಿಸಿದಾಗ ಮೇಘನಾ ಕಣ್ಣೀರು ಹಾಕುತ್ತಾರೆ.

ಈ ಪ್ರೋಮೋ ನೋಡಿದ ನೆಟ್ಟಿಗರು ನಿಮ್ಮ ಟಿಆರ್ ಪಿಗಾಗಿ ಆಕೆಗೆ ಪದೇ ಪದೇ ಚಿರು ನೆನಪುಗಳನ್ನು ತಂದು ಕಣ್ಣೀರು ಹಾಕಿಸಿ ಬಳಿಕ ಸಮಾಧಾನಿಸುವ ನಾಟಕವಾಡುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೊದಲು ಮೊದಲ ಸಂಚಿಕೆಯಲ್ಲೂ ಚಿರು ಸರ್ಜಾ ಬಗ್ಗೆ ವಿಶೇಷ ವಿಡಿಯೋ ಹಾಕಿದಾಗ ಮೇಘನಾ ಅತ್ತಿದ್ದರು. ಮತ್ತೆ ಮತ್ತೆ ಕಾರ್ಯಕ್ರಮದಲ್ಲಿ ಚಿರು ಸರ್ಜಾ ವಿಚಾರವೆತ್ತಿ ಮೇಘನಾ ಭಾವುಕರಾಗುವ ಸನ್ನಿವೇಶ ಸೃಷ್ಟಿಸುವುದು ಯಾಕೆ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಗ್ಯಾಂಗ್ ನಲ್ಲಿ ಚಿರು ಗ್ಯಾಂಗ್