Publish Date: Fri, 11 Feb 2022 (11:40 IST)
Updated Date: Fri, 11 Feb 2022 (11:41 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕರಾಗಿ ಅಭಿನಯಿಸಿದ್ದ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ದಾಖಲೆಯ ವ್ಯೂ ಪಡೆದುಕೊಂಡಿದೆ.
ಟೀಸರ್ ಬಗ್ಗೆ ಹೇಳುವುದಾದರೆ ಇದೊಂದು ಪವರ್ ಫುಲ್ ಟೀಸರ್. ಸಿನಿಮಾದಲ್ಲಿ ಮಿಸ್ಟರ್ ಜೆ. ಆಗಿ ಪುನೀತ್ ಮಿಂಚಿದ್ದು, ಭರ್ಜರಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಟೀಸರ್ ನಲ್ಲಿ ಪುನೀತ್ ಸ್ಟಂಟ್ಸ್, ಅವರಿಗೆ ಶಿವಣ್ಣ ಧ್ವನಿ ಹೈಲೈಟ್. ವಿಶೇಷವಾಗಿ ನಂಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎಂದು ಶಿವಣ್ಣ ಧ್ವನಿಯಲ್ಲಿ ಬರುವ ಡೈಲಾಗ್ ಎಲ್ಲರಿಗೂ ಇಷ್ಟವಾಗಿದೆ.