Select Your Language

Notifications

webdunia
webdunia
webdunia
webdunia

ಮಂತ್ರಾಲಯದಲ್ಲಿ ಪುನೀತ್ ಜೊತೆಗೆ ಕೊನೆಯ ಕ್ಷಣ ಹಂಚಿಕೊಂಡ ಜಗ್ಗೇಶ್

ಮಂತ್ರಾಲಯದಲ್ಲಿ ಪುನೀತ್ ಜೊತೆಗೆ ಕೊನೆಯ ಕ್ಷಣ ಹಂಚಿಕೊಂಡ ಜಗ್ಗೇಶ್
ಬೆಂಗಳೂರು , ಶುಕ್ರವಾರ, 11 ಫೆಬ್ರವರಿ 2022 (10:20 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಮತ್ತು ಪುನೀತ್ ರಾಜ್ ಕುಮಾರ್ ನಡುವೆ ಅವಿನಾಭಾವ ಸಂಬಂಧವಿತ್ತು. ಪುನೀತ್ ಸಾವಿಗೆ ಕೆಲವು ದಿನಗಳ ಮೊದಲು ಇಬ್ಬರೂ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈ ಕ್ಷಣಗಳನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.

ಯುವರತ್ನ ಸಿನಿಮಾ ಬಿಡುಗಡೆಗೆ ಮೊದಲು ಜಗ್ಗೇಶ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೆ ಪುನೀತ್ ಮಂತ್ರಾಲಯಕ್ಕೆ ಜೊತೆಯಾಗಿ ಭೇಟಿ ನೀಡಿದ್ದರು.

ಈ ವೇಳೆ ಶ್ರೀಗಳ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ಹಂಚಿಕೊಂಡ ಜಗ್ಗೇಶ್, ಇದೇ ಕೊನೆಯ ಬಾರಿಗೆ ಪುನೀತನ ಜೊತೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು. ಅಂದು ಪುನೀತ ಅಲ್ಲೆ ಉಳಿದುಬಿಟ್ಟ ಎಂದು ಜಗ್ಗೇಶ್ ಬೇಸರದಿಂದಲೇ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ರಿಲೀಸ್ ದಿನವೇ ವಿವಾಹವಾದ ಲವ್ ಮಾಕ್ಟೇಲ್ 2 ನಟಿ