Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ: ಇಂದು ಫ್ಯಾನ್ಸ್ ಗೆ ಭರ್ಜರಿ ಗಿಫ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮ: ಇಂದು ಫ್ಯಾನ್ಸ್ ಗೆ ಭರ್ಜರಿ ಗಿಫ್ಟ್
ಬೆಂಗಳೂರು , ಬುಧವಾರ, 16 ಫೆಬ್ರವರಿ 2022 (09:20 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ದಿನ ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.

ಈ ಬಾರಿ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ದರ್ಶನ್ ಅದ್ಧೂರಿ ಬರ್ತ್ ಡೇ ಆಚರಣೆ ಇಲ್ಲ ಈ ಮೊದಲೇ ಘೋಷಿಸಿದ್ದರು. ಈ ದಿನ ತಾವು ಮನೆಯಲ್ಲೂ ಇರಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಫ್ಯಾನ್ಸ್ ಗೆ ಮೆಚ್ಚಿನ ನಟನ ಜೊತೆ ಬರ್ತ್ ಡೇ ಸಂಭ್ರಮಾಚರಿಸಲು ಸಾಧ್ಯವಾಗಲ್ಲ.

ಆದರೆ ಹಾಗಂತ ಅಭಿಮಾನಗಳು ನಿರಾಶರಾಗಬೇಕಿಲ್ಲ. ಇಂದು ಕ್ರಾಂತಿ ಸಿನಿಮಾದ ಫಸ್ಟ್ ಲುಕ್ ಬೆಳಿಗ್ಗೆ 10 ಗಂಟೆಗೆ ಲಾಂಚ್ ಆಗಲಿದೆ. ಇದಲ್ಲದೆ ದರ್ಶನ್ ಹೊಸ ಸಿನಿಮಾವೊಂದು ಇಂದು ಘೋಷಣೆಯಾಗಲಿದೆ. ಈ ವಾರಂತ್ಯದಲ್ಲಿ ದರ್ಶನ್ ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸಿದ್ದ ಮೆಜೆಸ್ಟಿಕ್ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಈ ಮೂರು ಸುದ್ದಿಗಳು ಅಭಿಮಾನಿಗಳ ಪಾಲಿಗೆ ಹಬ್ಬವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಂಬು ಗರ್ಭಿಣಿ ಅಮೂಲ್ಯಗೆ ನಟಿ ರಮ್ಯಾ ದುಬಾರಿ ಗಿಫ್ಟ್