Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ವಿಶಿಷ್ಟವಾಗಿ ಆಚರಿಸಲು ಸಿದ್ಧರಾದ ಫ್ಯಾನ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ವಿಶಿಷ್ಟವಾಗಿ ಆಚರಿಸಲು ಸಿದ್ಧರಾದ ಫ್ಯಾನ್ಸ್
ಬೆಂಗಳೂರು , ಭಾನುವಾರ, 13 ಫೆಬ್ರವರಿ 2022 (11:50 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಆದರೆ ಅವರ ಅಭಿಮಾನಿಗಳು ಈಗಿಂದಲೇ ಅದಕ್ಕೆ ತಯಾರಿ ಆರಂಭಿಸಿದ್ದಾರೆ.

ಫೆಬ್ರವರಿ 16 ರಂದು ದರ್ಶನ್ ಬರ್ತ್ ಡೇ ಇದೆ. ಹಿಂದೊಮ್ಮೆ ದರ್ಶನ್ ತಮ್ಮ ಹುಟ್ಟುಹಬ್ಬದಂದು ಕೇಕ್, ಕಟೌಟ್ ಎಂದು ಖರ್ಚು ಮಾಡುವ ಬದಲು ದಿನಸಿ ವಸ್ತುಗಳನ್ನು ದಾನ ಮಾಡುವಂತೆ ಮನವಿ ಮಾಡಿದ್ದರು. ಅದನ್ನು ಅಭಿಮಾನಿಗಳು ಈಗಲೂ ಮರೆತಿಲ್ಲ.

ದರ್ಶನ್ ಹುಟ್ಟುಹಬ್ಬ ನಿಮಿತ್ತ ಈಗಾಗಲೇ ಕೆಲವು ಅಭಿಮಾನಿಗಳು ದಿನಸಿ ಸಾಮಗ್ರಿಗಳನ್ನು ಅನ್ನ ದಾಸೋಹ ಮಾಡುವ ಮಂದಿರಗಳಿಗೆ ವಿತರಿಸುವ ಕೆಲಸ ಆರಂಭಿಸಿದ್ದಾರೆ. ಈ ಬಾರಿಯೂ ದರ್ಶನ್ ಸಾರ್ವಜನಿಕವಾಗಿ ಬರ್ತ್ ಡೇ ಆಚರಿಸುವ ಸಾಧ‍್ಯತೆ ಕಡಿಮೆ. ಹಾಗಿದ್ದರೂ ಅಭಿಮಾನಿಗಳು ಆ ದಿನವನ್ನು ವಿಶೇಷವಾಗಿ ಆಚರಿಸುವುದನ್ನು ಮಾತ್ರ ಮರೆಯೋದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮದೇ ಚಿತ್ರತಂಡದ ವಿರುದ್ಧ ವೇದಿಕೆಯಲ್ಲೇ ಅಸಮಾಧಾನ ಹೊರಹಾಕಿದ ವಿನೋದ್ ಪ್ರಭಾಕರ್