Publish Date: Sun, 06 Mar 2022 (09:00 IST)
Updated Date: Sun, 06 Mar 2022 (09:23 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದ ಹಾಡೊಂದು ಇಷ್ಟರಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಇನ್ನೂ ಬಿಡುಗಡೆಯಾಗಿಲ್ಲ. ಇದಕ್ಕೆ ಕಾರಣವೂ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಕೆಜಿಎಫ್ 2 ನ ಇಂಟ್ರೋ ಹಾಡು ಈಗಾಗಲೇ ಶೂಟ್ ಮಾಡಲಾಗಿತ್ತು. ಆದರೆ ಇದು ನಿರ್ದೇಶಕ ಪ್ರಶಾಂತ್ ನೀಲ್ ಗೆ ತೃಪ್ತಿಯಾಗಿಲ್ಲ.
ಈ ಕಾರಣಕ್ಕೆ ಹಾಡನ್ನು ರಿಶೂಟ್ ಮಾಡಲು ತಯಾರಿ ನಡೆದಿದೆಯಂತೆ. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗಲಿದ್ದು, ಈಗಾಗಲೇ ಪ್ರಚಾರದ ಸಿದ್ಧತೆಗಳು ಆರಂಭವಾಗಿದೆ.