Select Your Language

Notifications

webdunia
webdunia
webdunia
webdunia

ತಮ್ಮದೇ ಅದ್ಭುತ ಛಾಯಾಚಿತ್ರಗಳನ್ನು ಪ್ರಕಟಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ತಮ್ಮದೇ ಅದ್ಭುತ ಛಾಯಾಚಿತ್ರಗಳನ್ನು ಪ್ರಕಟಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಗುರುವಾರ, 3 ಮಾರ್ಚ್ 2022 (09:50 IST)
ಬೆಂಗಳೂರು: ವನ್ಯ ಜೀವಿ ದಿನಾಚರಣೆ ಅಂಗವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕ್ಯಾಮರಾ ಕೈ ಚಳಕವನ್ನು ಪ್ರದರ್ಶಿಸಿದ್ದಾರೆ.

ದರ್ಶನ್ ಗೆ ವನ್ಯ ಜೀವಿಗಳ ಮೇಲೆ ಎಷ್ಟು ಪ್ರೀತಿಯಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬಿಡುವು ಸಿಕ್ಕಾಗಲೆಲ್ಲಾ ಕ್ಯಾಮರಾ ಆತುಕೊಂಡು ಕಾಡಿನ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಇದೇ ರೀತಿ ತಾವು ತೆಗೆದ ಅಪರೂಪದ ಛಾಯಾಚಿತ್ರಗಳನ್ನು ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಇಂದು ವನ್ಯ ಜೀವಿ ದಿನಾಚರಣೆ ಅಂಗವಾಗಿ ಶುಭ ಹಾರೈಸುವುದರ ಜೊತೆಗೆ ಹುಲಿ, ಆನೆ ಸೇರಿದಂತೆ ತಾವು ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳನ್ನು ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಾಲಯದಲ್ಲಿ ರಾಯರ ಸೇವೆ ಮಾಡಿದ ಧ್ರು ವ ಸರ್ಜಾ