ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಶೂಟಿಂಗ್ ನಡುವೆಯೂ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ರಾಯರಿಗೆ ಪೂಜೆ ಸಲ್ಲಿಸಿದ್ದಾರೆ.
ತಮ್ಮ ಸಂಗಡಿಗರೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಧ್ರುವ ಸರ್ಜಾ ರಾಯರ ಪಲ್ಲಕ್ಕಿ ಸೇವೆ, ಪೂಜೆ ಸಲ್ಲಿಸಿ ರಾಯರ ದರ್ಶನ ಪಡೆದರು.
ಇನ್ನು, ಧ್ರುವ ಸರ್ಜಾ ಆಗಮನದ ಕಾರಣದಿಂದ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದರು. ತಮ್ಮನ್ನು ಭೇಟಿಯಾದ ಎಲ್ಲರಿಗೂ ಸೆಲ್ಫೀ ನೀಡಿ, ನಗುತ್ತಾ ಮಾತನಾಡಿಸಿದರು.