ಬೆಂಗಳೂರು: ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ನಟಿಸಿ, ಬಿಡುಗಡೆಯಾದ ಕಳೆದ ಮೂರು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಅದರ ಬೆನ್ನಲ್ಲೇ ದುಬಾರಿ ಕಾರನ್ನು ರಶ್ಮಿಕಾ ಖರೀದಿ ಮಾಡಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ನಟಿಸಿರುವ ಕಳೆದ ಮೂರು ಸಿನಿಮಾಗಳು ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮೂರು ಸಾವಿರ ಕೋಟಿ ದಾಟಿವೆ. ಪುಷ್ಪಾ 2, ಅನಿಮಲ್ ಮತ್ತು ಚಾವಾ ಹೀಗೆ ಒಂದರ ಹಿಂದೊಂದು ಹಿಟ್ ಸಿನಿಮಾ ನೀಡಿದ ಬೆನ್ನಲ್ಲೆ ರಶ್ಮಿಕಾರ ಸಂಭಾವನೆ ಏರಿಕೆಯಾಗಿದೆ. ಅದರ ಬೆನ್ನಲ್ಲೇ ತಮಗಾಗಿ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ.
ಮರ್ಸಿಡೀಸ್ ಎಸ್ 450 ಕಾರನ್ನು ರಶ್ಮಿಕಾ ಖರೀದಿ ಮಾಡಿದ್ದಾರೆ. ಇದರ ಬೆಲೆ ಬರೋಬ್ಬರಿ 2.25 ಕೋಟಿ. ರಶ್ಮಿಕಾರ ಇಷ್ಟದ ಬಣ್ಣವಾದ ಕಪ್ಪು ಬಣ್ಣದ ಕಾರನ್ನೇ ರಶ್ಮಿಕಾ ಖರೀದಿ ಮಾಡಿದ್ದು, ಸೆಡಾನ್ ಮಾದರಿಯ ಕಾರು ಇದಾಗಿದೆ. ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯುತ್ತಮ ಸೌಲಭ್ಯಗಳು, ಸೌಕರ್ಯಗಳು ಹಾಗೂ ಸೇಫ್ಟಿ ಫೀಚರ್ಸ್ ಬರುತ್ತವೆ.
ಈ ಕಾರಿನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನವಿದೆ. ಆರಾಮದಾಯಕ ಪ್ರಯಾಣಕ್ಕೆ ಸೀಟ್ ರಿಕ್ಲೈನರ್, ಇನ್ಬಿಲ್ಟ್ ಫ್ರಿಡ್ಜ್, ಹಿಂದಿನ ಸೀಟಿಗೆ ಟಿವಿ, ವಿಶಾಲವಾದ ಲೆಗ್ ರೂಂ, ಆಟೋಮ್ಯಾಟಿಕ್ ಡೋರ್ಗಳು, ಅತ್ಯುತ್ತಮ ಭದ್ರತೆ, ಹೀಟೆಡ್, ವೆಂಟಿಲೇಟೆಡ್ ಸೀಟ್ಗಳು ಇನ್ನೂ ಹಲವು ಅತ್ಯುತ್ತಮ ಸೌಲಭ್ಯಗಳು ಈ ಐಶಾರಾಮಿ ಕಾರಿನಲ್ಲಿದೆ.
ಕೆಲ ವರ್ಷದ ಹಿಂದಷ್ಟೆ ಕಪ್ಪು ಬಣ್ಣದ ಲ್ಯಾಂಡ್ ರೋವರ್ ಕಾರೊಂದನ್ನು ರಶ್ಮಿಕಾ ಮಂದಣ್ಣ ಖರೀದಿ ಮಾಡಿದ್ದರು. ಅದಾದ ಬಳಿಕ ಇನ್ನೋವಾ ಕ್ರಿಸ್ಟಾ ಕಾರೊಂದನ್ನು ಸಹ ಖರೀದಿ ಮಾಡಿದರು. ಒಂದು ಮಿನಿ ಕೂಪರ್ ಕಾರು ಸಹ ರಶ್ಮಿಕಾ ಮಂದಣ್ಣ ಬಳಿ ಇದೆ.