Select Your Language

Notifications

webdunia
webdunia
webdunia
webdunia

ಜೀವನ ಚಿಕ್ಕದಾಗಿದೆ, ಪ್ರತಿದಿನ ಸಂತೋಷದಿಂದಿರಿ ಎಂದಿದ್ದೇಕೆ ರಶ್ಮಿಕಾ ಮಂದಣ್ಣ

ಜೀವನ ಚಿಕ್ಕದಾಗಿದೆ, ಪ್ರತಿದಿನ ಸಂತೋಷದಿಂದಿರಿ ಎಂದಿದ್ದೇಕೆ ರಶ್ಮಿಕಾ ಮಂದಣ್ಣ

Sampriya

ಬೆಂಗಳೂರು , ಮಂಗಳವಾರ, 10 ಸೆಪ್ಟಂಬರ್ 2024 (17:13 IST)
photo Courtesy Instagram
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಹಲವು ದಿನಗಳ ಬಳಿಕ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.  ಇನ್ನು ತಮ್ಮ ಅಭಿಮಾನಿಗಳಲ್ಲಿ ತಾನೂ ಸಣ್ಣ ಅಪಘಾತದಿಂದಾಗಿ ಇದೀಗ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಿಮ್ಮೆದರು ಕಾಣಿಸಿಕೊಳ್ಳದೆ ಹಲವು ದಿನಗಳಾಗಿವೆ ಎಂದು ತಿಳಿದಿದೆ. ನನಗೆ ಸಣ್ಣ ಅಪಘಾತವಾಗಿದೆ. ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದೇನೆ. ತಲೆ ಎತ್ತಲು ಹಾಗೂ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತಿದೆ. ನಿಮ್ಮ ಬಗ್ಗೆ ಕಾಳಜಿವಹಿಸಲು ಆದ್ಯತೆ ನೀಡಿ. ಏಕೆಂದರೆ ಜೀವನ ಚಿಕ್ಕದಾಗಿದೆ. ನಮಗೆ ನಾಳೆ ಎನ್ನುವುದು ಇದೆಯೋ ಇಲ್ಲವೋ ಎನ್ನುವುದು ತಿಳಿದಿಲ್ಲ. ಹೀಗಾಗಿ ಪ್ರತಿದಿನ ಸಂತೋಷದಿಂದಿರಿ ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಅವರ ಪೋಸ್ಟ್ ಹಾಕುತ್ತಿದ್ದ ಹಾಗೇ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಕೆಟ್ಟ ಮೆಸೇಜ್‌ಗೆ ಬಗ್ಗೆ ರಾಗಿಣಿ, ಶುಭ ಪೂಂಜಾ ರಿಯ್ಯಾಕ್ಷನ್