Select Your Language

Notifications

webdunia
webdunia
webdunia
webdunia

ಲಡಾಖ್‌ನಲ್ಲಿ ಕಮರಿಗೆ ಉರುಳಿದ ಶಾಲಾ ಬಸ್‌: 7 ಮಂದಿ ಸ್ಥಳದಲ್ಲೇ ದುರ್ಮರಣ, ಸಾವು ಬದುಕಿನ ಮಧ್ಯೆ 20ಮಂದಿ

Ladakh School Bus Accident

Sampriya

ಲೇಹ್ , ಗುರುವಾರ, 22 ಆಗಸ್ಟ್ 2024 (20:26 IST)
Photo Courtesy X
ಲೇಹ್: ಲಡಾಖ್‌ನ ದುರ್ಬುಕ್ ಬಳಿ ಗುರುವಾರ 27 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಮರಿಗೆ ಬಿದ್ದ ಪರಿಣಾಮ ಏಳು ಜನರು ಸಾವನ್ನಪ್ಪಿ, 20 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಭಾರತೀಯ ಸೇನೆಯ ಅಧಿಕಾರಿಗಳ ಪ್ರಕಾರ, "ಇಂದು 27 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್‌ನ ನಿಯಂತ್ರಣ ತಪ್ಪಿ ಲಡಾಖ್‌ನ ದುರ್ಬುಕ್ ಬಳಿ ಸುಮಾರು 5 ಕಿ.ಮೀ ದೂರದ ಕಮರಿಯಲ್ಲಿ ಬಿದ್ದಿದೆ. ಅಪಘಾತವನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಸೈನಿಕರು ಗಮನಿಸಿದಾಗ ತಕ್ಷಣವೇ ಧಾವಿಸಿದರು. ಕೂಡಲೇ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.

ಎಲ್ಲಾ 27 ಜನರನ್ನು (06 ಮಾರಣಾಂತಿಕ ಸೇರಿದಂತೆ) ಆರಂಭದಲ್ಲಿ ಹತ್ತಿರದ ಮಿಲಿಟರಿ ಆಸ್ಪತ್ರೆ ಮತ್ತು ಟ್ಯಾಂಗ್‌ಸ್ಟೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು ಎಂದು ಸೇನೆಯು ಹೇಳಿದೆ.

"ಅವರನ್ನು ತರುವಾಯ ವಿಮಾನದ ಮೂಲಕ (ಮಿಲಿಟರಿ ALH ಮತ್ತು ಚೀಟಲ್ ಹೆಲಿಕಾಪ್ಟರ್‌ಗಳಿಂದ 14 ಸೋರ್ಟೀಸ್) ಲೇಹ್‌ನಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರಂಭಿಕ ಪರೀಕ್ಷೆ ಮತ್ತು ಚಿಕಿತ್ಸೆಯ ನಂತರ 20 ಪ್ರಕರಣಗಳನ್ನು ಲೇಹ್‌ನ SNM ಆಸ್ಪತ್ರೆಗೆ ಕಳುಹಿಸಲಾಯಿತು ಮತ್ತು ಬೆನ್ನುಮೂಳೆಯ ಗಾಯಗೊಂಡ ಒಬ್ಬ ಗಾಯಾಳುವನ್ನು ಮಿಲಿಟರಿ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮುಡಾ ಕೇಸ್ ಮುಯ್ಯಿಗೆ ಮುಯ್ಯಿ: ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಕೇಸ್‌ಗೂ ಮರು ಜೀವ