Select Your Language

Notifications

webdunia
webdunia
webdunia
webdunia

ಮುಂಗಡ ಬುಕಿಂಗ್​ನಲ್ಲಿ ಪುಷ್ಪ 2 ದಾಖಲೆ: ಬಿಡುಗಡೆಗೂ ಮೊದಲೇ 100 ಕೋಟಿ ಕ್ಲಬ್ ಸೇರಿದ ಅಲ್ಲು ಸಿನಿಮಾ

Tollywood Star Allu Arjun

Sampriya

ಹೈದರಾಬಾದ್ , ಬುಧವಾರ, 4 ಡಿಸೆಂಬರ್ 2024 (15:34 IST)
Photo Courtesy X
ಹೈದರಾಬಾದ್‌: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪುಷ್ಪಾ 2 ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಫಹಾದ್ ಫಾಸಿಲ್, ಡಾಲಿ ಧನಂಜಯ ಮೊದಲಾದವರು ನಟಿಸಿರೋ ಈ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದೆ.

ಪುಷ್ಪ 2 ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲ ದಿನಗಳು ಕಳೆದಿವೆ. ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ಹರಿದು ಬಂದಿದೆ. ಹೀಗಾಗಿ, ಮೊದಲ ದಿನ ಈ ಚಿತ್ರ ಎಷ್ಟು ಕೋಟಿ ಗಳಿಕೆ ಮಾಡಬಹುದು ಎನ್ನುವ ಕುತೂಹಲ ಜೋರಾಗಿದೆ.

ಈ ಸಿನಿಮಾ ಸುಮಾರು 12 ಸಾವಿರ ಸ್ಕ್ರೀನ್​ಗಳಲ್ಲಿ ಪ್ರಸಾರ ಕಾಣುತ್ತಿದೆ. ಈ ಚಿತ್ರ ಹಲವು ಫಾರ್ಮ್ಯಾಟ್​ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಅಡ್ವಾನ್ಸ್ ಬುಕಿಂಗ್‌ನಲ್ಲೂ ದಾಖಲೆ ಬರೆದಿದೆ.

ಕೆಲವು ವರದಿಗಳ ಪ್ರಕಾರ ಮೊದಲ ದಿನ ಈ ಚಿತ್ರದ ಗಳಿಕೆ 300 ಕೋಟಿ ರೂಪಾಯಿ ದಾಟಲಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಮೊದಲ ನಾಲ್ಕು ದಿನದಲ್ಲೇ ಸಿನಿಮಾದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸಿದರೂ ಅಚ್ಚರಿ ಏನಿಲ್ಲ.

ಸದ್ಯ ಪ್ರೀ ಬುಕಿಂಗ್​ನಿಂದ ಭಾರತದಲ್ಲಿ 70 ಕೋಟಿ ರೂಪಾಯಿ ಹರಿದು ಬಂದರೆ, ವಿದೇಶದಲ್ಲಿ 30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇಂದು ಹಲವು ಕಡೆಗಳಲ್ಲಿ ಪ್ರೀಮಿಯರ್ ಇದ್ದು, ಇದನ್ನು ಸೇರಿ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.

2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಚಿತ್ರ ಈಗಾಗಲೇ ಅಡ್ವಾನ್ಸ್ ಬುಕಿಂಗ್​ನಲ್ಲಿ ಕೆಜಿಎಫ್, ಆರ್​ಆರ್​ಆರ್ ಮೊದಲಾದ ಚಿತ್ರಗಳನ್ನು ಹಿಂದಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋಹಕ ತಾರೆ ಅಭಿಮಾನಿಗಳಿಗೆ ಸಿಹಿಸುದ್ದಿ: ರಮ್ಯಾ-ಉಪೇಂದ್ರ ಅಭಿನಯದ ಸಿನಿಮಾ ತೆರೆಗೆ ಬರಲು ಸಜ್ಜು