Select Your Language

Notifications

webdunia
webdunia
webdunia
webdunia

ಮತ್ತೊಂದು ಬಿಗ್ ಸಿನಿಮಾದ ನ್ಯಾಶನಲ್ ಕ್ರಶ್, ಧನುಷ್ ಜತೆ ಶೂಟಿಂಗ್‌ನಲ್ಲಿ ಬ್ಯುಸಿಯಾದ ರಶ್ಮಿಕಾ

Rashmika Mandanna

Sampriya

ಮುಂಬೈ , ಗುರುವಾರ, 25 ಏಪ್ರಿಲ್ 2024 (17:59 IST)
Photo Courtesy X
ಮುಂಬೈ: ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಇದೀಗ ನಟ ಧನುಷ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿರು 'ಕುಬೇರ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಕುಬೇರ ಸಿನಿಮಾ ತಂಡ ಮುಂಬೈನಲ್ಲಿ ಶೂಟಿಂಗ್ ಮಾಡುತ್ತಿದ್ದು, ರಶ್ಮಿಕಾ ಅವರು ಸೆಟ್‌ನಿಂದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ತನ್ನ ಇನ್‌ಸ್ಟಾಗ್ರಾಂನ ಸ್ಟೋರಿನಲ್ಲಿ ಗುರುವಾರ ಚಂದ್ರ ಮತ್ತು ಕಟ್ಟಡವನ್ನು ತೋರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಂಡ ಅವರು, "ಇದು ಪ್ಯಾಕ್ ಅಪ್! ಕುಬೇರ" ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ರಶ್ಮಿಕಾ ಮತ್ತು ಧನುಷ್ ಜೊತೆಗೆ, ಅಕ್ಕಿನೇನಿ ನಾಗಾರ್ಜುನ ಮತ್ತು ಜಿಮ್ ಸರ್ಭ್ ಕೂಡ ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶೇಖರ್ ಕಮ್ಮುಲ ನಿರ್ದೇಶನದ ಮತ್ತು ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಬ್ಯಾನರ್‌ನಡಿಯಲ್ಲಿ ಸುನೀಲ್ ನಾರಂಗ್ ನಿರ್ಮಿಸಿರುವ ಕುಬೇರ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿದೆ. 'ಕುಬೇರ' ಚಿತ್ರದ ಬಿಡುಗಡೆ ದಿನಾಂಕ ಇನ್ನಷ್ಟೇ ಪ್ರಕಟವಾಗಬೇಕಿದೆ.

ಕುಬೇರನ ಹೊರತಾಗಿ, ರಶ್ಮಿಕಾ ಕೂಡ ಆಕ್ಷನ್ ಥ್ರಿಲ್ಲರ್ 'ಪುಷ್ಪ: ದಿ ರೂಲ್' ನಲ್ಲಿ ತಮ್ಮ ಪಾತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಿರಾಫೆ ನೋಡಿ ಉಫ್ ಎಂದ ರಾಯನ್, ಮೈಸೂರಿನಲ್ಲಿ ಜಾಲಿ ಮೂಡ್‌ನಲ್ಲಿ ಮೇಘನಾ ಕುಟುಂಬ