Select Your Language

Notifications

webdunia
webdunia
webdunia
Monday, 7 April 2025
webdunia

ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ, 'ಮಿಲ್ಕ್ ಬ್ಯೂಟಿ' ತಮನ್ನಾಗೆ ಸಮನ್ಸ್‌

Tamannaah Bhatia summoned

Sampriya

ಮುಂಬೈ , ಗುರುವಾರ, 25 ಏಪ್ರಿಲ್ 2024 (17:11 IST)
photo Courtesy Instagram
ಮುಂಬೈ:  ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ ಮಾಡಿದ್ದ ಆರೋಪದ ಮೇರೆಗೆ ಖ್ಯಾತ ನಟಿ ತಮನ್ನಾ ಭಾಟಿಯಾಗೆ ಮುಂಬೈ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಫೇರ್‌ಪ್ಲೇ ಆ್ಯಪ್‌ನಲ್ಲಿ ಐಪಿಎಲ್ 2023 ರ ಅಕ್ರಮ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ವಯಾಕಾಮ್‌ಗೆ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಉಂಟುಮಾಡಿದ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ನಟ ತಮನ್ನಾ ಭಾಟಿಯಾ ಅವರನ್ನು ವಿಚಾರಣೆಗೆ ಕರೆದಿದೆ. ಏಪ್ರಿಲ್ 29 ರಂದು ಮಹಾರಾಷ್ಟ್ರ ಸೈಬರ್‌ಗೆ ಹಾಜರಾಗುವಂತೆ ಆಕೆಗೆ ತಿಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಏಪ್ರಿಲ್ 29 ರಂದು ವಿಚಾರಣೆಗೆ ಹಾಜರಾಗುವಂತೆ ನಟಿಯನ್ನು ಕೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ದತ್ ಹೆಸರು ಕೂಡ ಕೇಳಿಬಂದಿದೆ.  ಏಪ್ರಿಲ್ 23 ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು ಆದರೆ ಅವರು ಭಾರತದಲ್ಲಿ ಇರದ ಕಾರಣ ಸಮಯವನ್ನು ಕೋರಿದ್ದರು.‌

ಅನಧಿಕೃತವಾಗಿ ಯಾವುದೇ ಒಪ್ಪಿಗೆ ಇಲ್ಲದೆ ಫೇರ್​ಪ್ಲೇ ಆ್ಯಪ್‌ನಲ್ಲಿ 2023ರ ಐಪಿಎಲ್‌ ಅಂದರೆ (ಸೀಸನ್‌ 16) ಪ್ರಸಾರ ಮಾಡಿದ ಆರೋಪ ಹಿನ್ನೆಲೆ 20 ಕ್ಕೂ ಹೆಚ್ಚು ಪ್ರಭಾವಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸಲು ಶೀಘ್ರದಲ್ಲೇ ಕರೆಸಿಕೊಳ್ಳುವ  ಸಾಧ್ಯತೆಯಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ನಟನೆಗೆ ಮರಳಿದ ಬಾಲಿವುಡ್ ಬಬ್ಲಿ ಗರ್ಲ್‌ ಪ್ರೀತಿ ಜಿಂಟಾ