Select Your Language

Notifications

webdunia
webdunia
webdunia
webdunia

ಜಿರಾಫೆ ನೋಡಿ ಉಫ್ ಎಂದ ರಾಯನ್, ಮೈಸೂರಿನಲ್ಲಿ ಜಾಲಿ ಮೂಡ್‌ನಲ್ಲಿ ಮೇಘನಾ ಕುಟುಂಬ

ಜಿರಾಫೆ ನೋಡಿ ಉಫ್ ಎಂದ ರಾಯನ್, ಮೈಸೂರಿನಲ್ಲಿ ಜಾಲಿ ಮೂಡ್‌ನಲ್ಲಿ ಮೇಘನಾ ಕುಟುಂಬ

Sampriya

ಮೈಸೂರು , ಗುರುವಾರ, 25 ಏಪ್ರಿಲ್ 2024 (17:46 IST)
Photo Courtesy X
ಮೈಸೂರು:  ನಟಿ ಮೇಘನಾ ರಾಜ್ ಅವರು ತಮ್ಮ ಶೂಟಿಂಗ್‌ನಿಂದ ಸ್ವಲ್ಪ ಬಿಡುವು ಪಡೆದು ಮಗ ಹಾಗೂ ಪೋಷಕರ ಜತೆ ಮೈಸೂರಿನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ಬೇಸಿಗೆ ರಜೆಯಲ್ಲಿರುವ ಮಗ ರಾಯನ್ ರಾಜ್ ಸರ್ಜಾ ಹಾಗೂ ತಾಯಿ ಪ್ರಮೀಳಾ, ತಂದೆ ಸುಂದರ್‌ ರಾಜ್ ಜತೆ ಮೈಸೂರಿನಲ್ಲಿರುವ  ಮೃಗಾಲಯಕ್ಕೆ ಭೇಟಿ ಕೊಟ್ಟಿರುವ ಮೇಘಾನ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವೇಳೆ ಮೈಸೂರು ಮಹಾರಾಣಿ ಪ್ರಮೋದಾ ದೇವಿ ಅವರ ಮೊಮ್ಮಗ ಆದ್ಯವೀರ್ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಮೇಘನಾ ರಾಜ್ ಅವರು, ಮಹಾರಾಣಿ ಹಾಗೂ ಲಿಟಲ್ ಫ್ರಿನ್ಸ್ ಜತೆಗೆ ಇದೊಂದು ರಾಯಲ್ ಕ್ಷಣ, ಈ ಕ್ಷಣವನ್ನು ಎಂದೆಂದಿಗೂ ಸ್ಮರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.  

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಅಖಾಡ ದಿನದಿಂದ ದಿನಕ್ಕೇ ರಂಗೇರುತ್ತಿದ್ದು, ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಇನ್ನೂ ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಕಣಕ್ಕಿಳಿದಿದ್ದಾರೆ. ಸದ್ಯ ಯದುವೀರ್ ಅವರು ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ಈ ನಡುವೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರೀತಿಯ ಮೊಮ್ಮಗನ ಜೊತೆ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮವಾಗಿ ಐಪಿಎಲ್ ಪಂದ್ಯ ಪ್ರಸಾರ, 'ಮಿಲ್ಕ್ ಬ್ಯೂಟಿ' ತಮನ್ನಾಗೆ ಸಮನ್ಸ್‌