ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ, ಇದೀಗ ಜಾಮೀನು ಮೂಲಕ ಹೊರಬಂದಿರುವ ನಟ, ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಅವರು ರಾಜ್ಯದ ಜನತೆಯಲ್ಲಿ ಕ್ಷಮೆ ಕೋರಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ಕಳೆದ ಕೆಲ ದಿನಗಳಿಂದ ಮಚ್ಚಿನ ಕಥೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ವಿಡಿಯೋ ಮೂಲಕ ರಾಜ್ಯದ ಜನತೆಗೆ, ನನ್ನ ಅಭಿಮಾನಿಗಳಲ್ಲಿ ಹಾಗೂ ಫ್ಯಾಮಿಲಿ ಬಳಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ಮೊದಲನೆಯಾದಾಗಿ ನನ್ನಿಂದ್ದ ತೊಂದರೆಯಾಗಿರುವುದು ನನ್ನ ಪತ್ನಿ ಹಾಗೂ ಮಗನಿಗೆ. ನನ್ನ ಸ್ನೇಹಿತರಿಗೆ ತುಂಬಾ ತೊಂದರೆಯಾಗಿದೆ. ರಾತ್ರಿ ಹಗಲು ನನಗಾಗಿ ಸೆಂಟ್ರಲ್ ಜೈಲು ಮುಂದೆ ಕಾದು ಕುಳಿತಿದ್ದಾರೆ. ಈ ವಿಚಾರ ಇಷ್ಟೊಂದು ದೊಡ್ಡದಾಗುತ್ತದೆ ಎಂದು ಗೊತ್ತಿರಲಿಲ್ಲ. ನಾನು ಮಚ್ಚು ಹಿಡಿದು ರೀಲ್ಸ್ ಮಾಡಿದರಲ್ಲಿ ನನ್ನದು ತಪ್ಪಿದೆ. ನಾನು ಈ ರೀತಿಯ ಮಾಹಿತಿ ಹಂಚಿಕೊಳ್ಳಬಾರದಿತ್ತು ಎಂದು ಹೇಳಿದ್ದಾರೆ.
ಪೊಲೀಸರು ನಮ್ಮನ್ನು ಸಾಮಾನ್ಯ ಮನುಷ್ಯರಂತೆಯೇ ತನಿಖೆ ನಡೆಸಿದ್ದಾರೆ. ಸೆಲೆಬ್ರಿಟಿ ಎನ್ನುವ ವಿಚಾರವನ್ನು ಮುಂದಿಟ್ಟುಕೊಳ್ಳದೆ ತನಿಖೆ ನಡೆಸಲಾಗಿದೆ. ಕಾನೂನುಬದ್ಧವಾಗಿ ತನಿಖೆ ನಡೆಸಿದ್ದಾರೆ ಎಂದರು.