Select Your Language

Notifications

webdunia
webdunia
webdunia
webdunia

ಮಚ್ಚು ಹಿಡಿದು ರೀಲ್ಸ್‌ ಮಾಡಿದ ಸ್ಥಳಕ್ಕೆ ವಿನಯ್‌ ಗೌಡ, ರಜತ್‌ರನ್ನು ಕರೆತಂದ ಖಾಕಿ

ಮಚ್ಚು ಹಿಡಿದು ರೀಲ್ಸ್‌ ಮಾಡಿದ ಸ್ಥಳಕ್ಕೆ ವಿನಯ್‌ ಗೌಡ, ರಜತ್‌ರನ್ನು ಕರೆತಂದ ಖಾಕಿ

Sampriya

ಬೆಂಗಳೂರು , ಮಂಗಳವಾರ, 25 ಮಾರ್ಚ್ 2025 (17:10 IST)
Photo Courtesy X
ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ನಟ ವಿನಯ್ ಗೌಡ ಹಾಗೂ ರಜತ್ ಕಿಶನ್‌ ಅವರನ್ನು ಬಸವೇಶ್ವರ ನಗರದ ಪೊಲೀಸರು ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸುವಾಗ ಯಾವ ಜಾಗದಲ್ಲಿ ವಿಡಿಯೋ ಮಾಡಿದ್ದು? ನಿಮಗೆ ಮಚ್ಚು ಕೊಟ್ಟೋರು ಯಾರು? ಅನ್ನೋದನ್ನು ವಿನಯ್ ಮತ್ತು ರಜತ್‌ರಿಂದ ಕೇಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ, ಮಹಜರಿನ ದೃಶ್ಯವನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಸ್ಥಳ ಮಹಜರು ಬಳಿಕ ರೀಲ್ಸ್ ಮಾಡಲು ಬಯಸಿದ್ದ ಲಾಂಗ್‌ ಅನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಕೋರ್ಟ್‌ಗೆ ಇಬ್ಬರನ್ನೂ ಹಾಜರು ಪಡಿಸಲಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು 'ರೀಲ್ಸ್‌' ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಬಿಗ್ ಬಾಸ್ ಖ್ಯಾತಿಯ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ನಿನ್ನೆ ಅರೆಸ್ಟ್ ಮಾಡಲಾಗಿತ್ತು. ಬಸವೇಶ್ವರ ನಗರ ಠಾಣೆಯ ಪೊಲೀಸರು, ತಡರಾತ್ರಿ ಬಿಡುಗಡೆ ಮಾಡಿದ್ದಾರೆಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Smuggling Case: ಡಿಜಿಪಿ ಕೆ. ರಾಮಚಂದ್ರ ರಾವ್ ಪಾತ್ರದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ