ಕುಂದಾಪುರ: ತರಗತಿ ಶುರುವಾಗ ಗಡಿಬಿಡಿಯ ಮಧ್ಯೆಯೂ ವಿದ್ಯಾರ್ಥಿನಿಯೊಬ್ಬಳು ಹುತಾತ್ಮ ಯೋಧ ಅನೂಪ್ ಪೂಜಾರಿ ಭಾವಚಿತ್ರಕ್ಕೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐರ್‌ಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಲಹರಿ ದೇಶ ಪ್ರೇಮಕ್ಕೆ ನೆಟ್ಟಿಗರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿದ್ಯಾರ್ಥಿನಿ ಲಹರಿ ಗಡಿಬಿಡಿಯಲ್ಲೇ ಶಾಲೆಯತ್ತ ನಡೆದುಕೊಂಡು ಹೋಗುತ್ತಿದ್ದಾಳೆ. ಯೋಧನಿಗೆ ಶ್ರದ್ಧಾಂಜಲಿಯ ಬ್ಯಾನರ್‌ಗೆ ವಿದ್ಯಾರ್ಥಿನಿ ಸೆಲ್ಯೂಟ್ ಹೊಡೆದು, ಶಾಲೆ ಕಡೆ ಹೆಜ್ಜೆಯಿಟ್ಟಿದ್ದಾಳೆ. ಇನ್ನೂ ವಿದ್ಯಾರ್ಥಿನಿ ಪ್ರತಿ ದಿನವೂ ಹೀಗಿಯೇ ಹುತಾತ್ಮ ಯೋಧನಿಗೆ ನಮಸ್ಕರಿಸಿ ಹೋಗುತ್ತಾಳೆ ಎನ್ನಲಾಗಿದೆ. ಇದನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋದಲ್ಲಿ ಸೆರೆ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದಲ್ಲಿ ಸೇನಾ ವಾಹನ ಸ್ಕಿಡ್ ಆಗಿ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕರ್ನಾಟಕದ ಮೂವರು ಯೋಧ ಸೇರಿ ಐವರು ಮೃತಪಟ್ಟಿದ್ದು, ಈ ಪೈಕಿ ಓರ್ವ ಯೋಧ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ (31) ಅವರು