ಗುಜರಾತ್‌ನ ವಡೋದರಾದಲ್ಲಿ 20 ವರ್ಷದ ವ್ಯಕ್ತಿಯೊಬ್ಬ ತನ್ನ ಕಾರನ್ನು ನಾಲ್ವರ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಸ್ಥಳದಿಂದ ವೀಡಿಯೊವೊಂದು ಹೊರಬಿದ್ದಿದ್ದು, ಅಪಘಾತದ ನಂತರ ವಿಪರೀತ ಕುಡಿದ ಚಾಲಕ ಕಾರಿನಿಂದ ಹೊರಬಂದು "ಮತ್ತೊಂದು ಸುತ್ತು" ಎಂದು ಕೂಗುತ್ತಿರುವುದನ್ನು ತೋರಿಸುತ್ತದೆ.
ಗುರುವಾರ ತಡರಾತ್ರಿ 12.30 ರ ಸುಮಾರಿಗೆ ಕರೇಲಿಬಾಗ್ ಪ್ರದೇಶದ ಬಳಿ ಅಪಘಾತ ಸಂಭವಿಸಿದೆ. ರಕ್ಷಿತ್ ಚೌರಾಸಿಯಾ ಎಂದು ಗುರುತಿಸಲಾದ ಚಾಲಕನನ್ನು ಬಂಧಿಸಲಾಗಿದೆ. ಅವರು ಉತ್ತರ ಪ್ರದೇಶದ ವಾರಣಾಸಿ ನಿವಾಸಿಯಾಗಿದ್ದು, ವಡೋದರಾದ ವಿಶ್ವವಿದ್ಯಾಲಯವೊಂದರಲ್ಲಿ ಕಾನೂನು ಅಧ್ಯಯನ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಅಪಘಾತದ ಸಮಯದಲ್ಲಿ ಚೌರಾಸಿಯಾ ಅವರೊಂದಿಗೆ ಪ್ರಯಾಣಿಸುತ್ತಿದ್ದ, ಕಾರಿನ ಮಾಲೀಕರಾಗಿರುವ ಪ್ರಕರಣದ ಎರಡನೇ ಆರೋಪಿಯನ್ನು ಸಹ ಬಂಧಿಸಲಾಗಿದೆ. ಅವರನ್ನು ವಡೋದರಾದಲ್ಲಿ ವಾಸಿಸುವ ಮತ್ತು ಖಾಸಗಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿರುವ ಮಿತ್ ಚೌಹಾಣ್ ಎಂದು ಗುರುತಿಸಲಾಗಿದೆ.
ವೈರಲ್ ವಿಡಿಯೋದಲ್ಲಿ ಕುಣಿದ ಮತ್ತಿನಲ್ಲಿ ಸರಣಿ ಅಪಘಾತ ನಡೆಸಿದ್ದು, ಒಬ್ಬರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ. ಕಾರಿನ ಮುಂಭಾಗವು ತೀವ್ರ ನಜ್ಜುಗುಜ್ಜಾಗಿದ್ದ ಚಾಲಕನ ಸೀಟ್‌ನಲ್ಲಿದ್ದ ಆರೋಪಿ, ಮತ್ತೊಂದು ಸುತ್ತು ಎಂದು ಹೇಳುತ್ತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಅವನು "ಓಂ ನಮಃ ಶಿವಾಯ" ಎಂದು ಜಪಿಸಲು ಪ್ರಾರಂಭಿಸುತ್ತಾನೆ.