Select Your Language

Notifications

webdunia
webdunia
webdunia
webdunia

ಮುಂಬೈ ಅಮರಾವತಿ ಎಕ್ಸ್ ಪ್ರೆಸ್ ರೈಲಿಗೆ ಸಿಕ್ಕ ಬೃಹತ್ ಲಾರಿ ಪೀಸ್ ಪೀಸ್: ವಿಡಿಯೋ

Mumbai Amaravati train

Krishnaveni K

ಮುಂಬೈ , ಶುಕ್ರವಾರ, 14 ಮಾರ್ಚ್ 2025 (15:38 IST)
Photo Credit: X
ಮುಂಬೈ: ಮುಂಬೈ ಅಮರಾವತಿ ಎಕ್ಸ್ ಪ್ರೆಸ್ ಗೆ ಸಿಲುಕಿದ ಬೃಹತ್ ಲಾರಿ ಪೀಸ್ ಪೀಸ್ ಆದ ಘಟನೆ ಇಂದು ಬೆಳಗಿನ ಜಾವ ಬೋದ್ ವಡ್ ರೈಲ್ವೆ ನಿಲ್ದಾಣ ಬಳಿ ಸಂಭವಿಸಿದೆ.

ರೈಲ್ವೇ ಕ್ರಾಸಿಂಗ್ ಗಾಗಿ ಗೇಟ್ ಹಾಕಿದ್ದರೂ ಲಾರಿ ವೇಗವಾಗಿ ಬಂದಿದ್ದರಿಂದ ರೈಲು ಢಿಕ್ಕಿಯಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಮತ್ತು ಜೊತೆಗಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ಘಟನೆಯಿಂದಾಗಿ ಗಂಟೆಗಳ ಕಾಲ ಪ್ರಯಾಣಿಕರು ರೈಲಿನಲ್ಲೇ ಸಿಲುಕಿಕೊಳ್ಳುವಂತಾಯಿತು.

ಗೂಡ್ಸ್ ಹೊಂದಿದ್ದ ಲಾರಿಯ ಮುಂಭಾಗ ಉಳಿದುಕೊಂಡಿದೆ. ಹೀಗಾಗಿ ಚಾಲಕ ಮತ್ತು ಸಹಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಲಾರಿ ಚಾಲಕನ ನಿರ್ಲ್ಯಕ್ಷವೇ ಕಾರಣ ಎಂದು ತಿಳಿದುಬಂದಿದೆ.

ರೈಲು ಹಳಿ ತೆರವುಗೊಳಿಸಿದ ನಂತರ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ಅಪಘಾತದ ಭೀಕರತೆ ನೋಡಿ ಕೆಲವು ಕಾಲ ಆತಂಕಪಡುವಂತಾಗಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯನ್ನು ಆಕ್ಸಿಡೆಂಟ್ ಮಾಡಿ ಕೊಂದು ರಸ್ತೆ ಮಧ್ಯೆ ಯುವಕನ ಪುಂಡಾಟ ವಿಡಿಯೋ ನೋಡಿ