ಮೈಸೂರು: ವಾಹನಗಳು ವಿಪರೀತ ಹೊಗೆ ಉಗುಳುತ್ತಿದ್ದರೆ ಸಾರಿಗೆ ಇಲಾಖೆ ದಂಢ ವಿಧಿಸುತ್ತದೆ. ಆದರೆ ಇಲ್ಲೊಂದು ಸರ್ಕಾರೀ ಬಸ್ ಹೊಗೆ ಉಗುಳುವ ಪರಿ ನೋಡಿದರೆ ಇದರ ಹಿಂದೆ ಸಿಕ್ಕಿಬಿದ್ದರೆ ದೇವರೇ ಗತಿ. ಈ ವಿಡಿಯೋ ಈಗ ವೈರಲ್ ಆಗಿದೆ.
ಮೈಸೂರಿನ ರವಿ ಕೀರ್ತಿ ಗೌಡ ಎಂಬವರು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕೆಎ-42 ಎಫ್-1828 ಸಂಖ್ಯೆಯ ಮೈಸೂರು ಸಿಟಿ ಬಸ್ ವಿಪರೀತ ಹೊಗೆ ಉಗುಳುತ್ತಾ ಸಂಚರಿಸುವ ವಿಡಿಯೋವೊಂದನ್ನು ಅವರು ಹಂಚಿಕೊಂಡಿದ್ದಾರೆ.
ಈ ಸರ್ಕಾರೀ ಬಸ್ ಎಷ್ಟು ಹೊಗೆ ಉಗುಳುತ್ತಿದೆ ಎಂದರೆ ಅದರ ಹಿಂದೆ ಏನಾದರೂ ಸಿಕ್ಕಿ ಹಾಕಿಕೊಂಡರೆ ಉಸಿರುಕಟ್ಟಿ ಅನಾಹುತವಾಗುವುದು ಗ್ಯಾರಂಟಿ. ಇಷ್ಟೊಂದು ಹೊಗೆ ಉಗುಳುವ ವಾಹನದಿಂದ ಪರಿಸರಕ್ಕೂ ಹಾನಿ.
ಜನರಿಗೆ ಬುದ್ಧಿ ಹೇಳಬೇಕಾದ ಸರ್ಕಾರವೇ ಇಂತಹ ಡಕೋಟ ಬಸ್ ನ್ನು ರಸ್ತೆಗೆ ಬಿಟ್ಟರೆ ಹೇಗೆ? ಇದರಿಂದ ಪರಿಸರಕ್ಕೆ ಎಷ್ಟು ಹಾನಿಯಾಗುತ್ತದೆ? ಇದರ ಬಗ್ಗೆ ಪೊಲೀಸರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಡಿಯೋ ಪ್ರಕಟಿಸಿ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿದೆ ಆ ವಿಡಿಯೋ ನೋಡಿ.