Select Your Language

Notifications

webdunia
webdunia
webdunia
webdunia

ರೈಲು ಸೀಟಿಗೇ ಮೂತ್ರಿಸಿದ ವ್ಯಕ್ತಿ: ವಿಡಿಯೋ ವೈರಲ್

Man passing urine in train

Krishnaveni K

ಬೆಂಗಳೂರು , ಶನಿವಾರ, 15 ಮಾರ್ಚ್ 2025 (12:09 IST)
ಬೆಂಗಳೂರು: ಕೆಲವರು ಎಷ್ಟೇ ಸುಶಿಕ್ಷಿತರಾಗಿದ್ದರೆನಿಸಿಕೊಂಡಿದ್ದರೂ ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಮಾಡುತ್ತದೆ. ಇದೀಗ ಅದೇ ರೀತಿ ವ್ಯಕ್ತಿಯೊಬ್ಬ ರೈಲ್ವೇ ಪ್ರಯಾಣದ ವೇಳೆ ಸೀಟ್ ಗೇ ಮೂತ್ರಿಸುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದು ನಡೆದಿರುವು ವಿಶಾಖಪಟ್ಟಣಂ ಮತ್ತು ಪೆರಂಬೂರ್ ನಡುವೆ ಸಂಚರಿಸುತ್ತಿದ್ದ ಗುವಾಹಟಿ ಬೆಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ. ರೈಲಿನಲ್ಲಿ ಅಷ್ಟೊಂದು ಪ್ರಯಾಣಿಕರಿರಲಿಲ್ಲ. ಈ ವೇಳೆ ಈ ಯುವಕ ಸದ್ದಿಲ್ಲದೆ ಕೃತ್ಯವೆಸಗಿದ್ದಾನೆ.

ರೈಲಿನ ಪ್ರತೀ ಭೋಗಿಗಳಲ್ಲಿ ಶೌಚಾಲಯ ವ್ಯವಸ್ಥೆಯಿದ್ದೇ ಇರುತ್ತದೆ. ಆದರೆ ಈ ವ್ಯಕ್ತಿ ಸೀಟ್ ನಿಂದ ಎದ್ದು ಅಲ್ಲಿಯೇ ಮೂತ್ರಿಸಿದ್ದಾನೆ. ವಿಶೇಷವೆಂದರೆ ಆತ ಮೂತ್ರಿಸುತ್ತಿರುವ ಸೀಟ್ ನ ಮತ್ತೊಂದು ಭಾಗದಲ್ಲಿ ಪ್ರಯಾಣಿಕರು ಆ ಕಡೆಗೆ ಮುಖ ಮಾಡಿ ಕೂತಿದ್ದಾರೆ.

ಈ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಅನಾಗರಿಕ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಇಂದು ಅಡಿಕೆ, ಕಾಳುಮೆಣಸು ರೇಟು ಹೆಚ್ಚಾಗಿಲ್ಲ, ಕಡಿಮೆಯೂ ಇಲ್ಲ ಇಲ್ಲಿದೆ ಡೀಟೈಲ್ಸ್