ಬೆಂಗಳೂರು: ಬಸ್, ಮೆಟ್ರೋ, ವಿದ್ಯುತ್ ನಡುವೆ ಬೆಂಗಳೂರಿಗರಿಗೆ ಈಗ ನೀರಿನ ದರವೂ ಏರಿಕೆಯಾಗಿ ಬರೆ ಮೇಲೆ ಬರೆ ಬಿದ್ದಂತಾಗಿದೆ. ಕಾವೇರಿ ನೀರಿನ ದರ ಲೀಟರ್ ಗೆ 1 ಪೈಸೆಯಂತೆ ಏರಿಕೆಗೆ ಆದೇಶ ನೀಡಲಾಗಿದೆ.
ಹಲವು ದಿನಗಳಿಂದ ನೀರಿನ ದರ ಏರಿಕೆಗೆ ಪ್ರಸ್ತಾವನೆಯಿತ್ತು. ಸದನದಲ್ಲೇ ಈ ಬಗ್ಗೆ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ನೀರಿನ ದರ ಹೆಚ್ಚಳ ಮಾಡುವುದು ನಿಶ್ಚಿತ ಎನ್ನುತ್ತಿದ್ದ ಡಿಕೆಶಿ ಹೇಳುತ್ತಿದ್ದರು. ಇದೀಗ ಸದನದಲ್ಲಿ ಪ್ರತೀ ಲೀಟರ್ ಗೆ 1 ಪೈಸೆಯಷ್ಟು ಏರಿಕೆ ಮಾಡಲಾಗುವುದು ಎಂದಿದ್ದರು.
ಪ್ರತೀ ಲೀಟರ್ ಗೆ ಕೇವಲ 1 ಪೈಸೆ ಎಂದು ನಿರಾಳವಾಗಬೇಕಿಲ್ಲ. ಪ್ರತೀ ಲೀಟರ್ ಗೆ 1 ಪೈಸೆಯಷ್ಟು ಎಂದರೂ ನೀರು ಶೇ.50 ರಿಂದ ಶೇ.90 ರಷ್ಟು ದುಬಾರಿಯಾಗಲಿದೆ. ಪ್ರಸ್ತುತ ಗೃಹಬಳಕೆ ನೀರನ್ನು ನಾಲ್ಕು ಸ್ಲ್ಯಾಬ್ ಗಳಾಗಿ ವಿಂಗಡಿಸಲಾಗಿದೆ.
ಅದರಂತೆ 1 ಲೀಟರ್ ಗೆ 1 ಪೈಸೆ ಹೆಚ್ಚಳ ಎಂದರೆ ಈಗ ಇರುವ 7 ರೂ. ಬದಲು 17 ರೂ. , 2 ನೇ ಸ್ಲ್ಯಾಬ್ ನಲ್ಲಿ 11 ರೂ. ಬದಲು 21 ರೂ., 3 ನೇ ಸ್ಲ್ಯಾಬ್ ನಲ್ಲಿ 25 ರ ಬದಲು 35 ರೂ., ಕಡೆಯ ಸ್ಲ್ಯಾಬ್ ನಲ್ಲಿ 45 ರ ಬದಲು 55 ರೂ. ಆಗಲಿದೆ.
ಪ್ರತೀ ತಿಂಗಳು 25 ಸಾವಿರ ಲೀ. ಬಳಸುವ ಮನೆಗೆ ಈಗ 243 ರೂ. ಪಾವತಿಸುತ್ತಿದ್ದರೆ ಇನ್ನು, 493 ರೂ. ಆಗಲಿದೆ. 5000 ಲೀ. ಬಳಸುವ ಮನೆಗೆ ಹಾಲಿ 812 ರೂ. ಇದ್ದರೆ ಇನ್ನು 1312 ರೂ. ಪಾವತಿಸಬೇಕು.