Select Your Language

Notifications

webdunia
webdunia
webdunia
webdunia

ಬೆಲೆ ಏರಿಕೆಯಿಂದ ಜನ ತತ್ತರಿಸಿದ್ರು, ಸಹಾಯ ಮಾಡೋಣ ಎಂದು 5 ಗ್ಯಾರಂಟಿ ಕೊಟ್ಟೆವು: ಡಿಕೆ ಶಿವಕುಮಾರ್

DK Shivakumar-Siddaramaiah

Krishnaveni K

ಬೆಂಗಳೂರು , ಮಂಗಳವಾರ, 11 ಮಾರ್ಚ್ 2025 (14:35 IST)
ಬೆಂಗಳೂರು: ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಕ್ಕೆ ನಾವು ಐದು ಗ್ಯಾರಂಟಿ ಕೊಟ್ಟೆವು ಎಂದು ಡಿಸಿಎಂ ಡಿಕೆ ಶಿವಕುಮಾರ್ ಸದನದಲ್ಲಿ ಇಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ವೇಳೆ ವಿಪಕ್ಷ ಸದಸ್ಯರು ಗದ್ದಲವೆಬ್ಬಿಸಿದ್ದಾರೆ.

ಸದನದಲ್ಲಿ ಇಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದ ಉದ್ದೇಶ ವಿವರಿಸಿದರು. ಈ ವೇಳೆ, ಜನ ಬೆಲೆ ಏರಿಕೆಯಿಂದ ಈ ದೇಶದ ಜನ ತತ್ತರಿಸುತ್ತಿದ್ದರು. ಆ ದೃಷ್ಟಿಯಿಂದ ನಾವು ಇಡೀ ದೇಶ ಯಾತ್ರೆ ಮಾಡಿ ಜನರು ಬೆಲೆ ಏರಿಕೆಯಿಂದ ಕಷ್ಟಪಡುತ್ತಿದ್ದುದನ್ನು ಮನಗಂಡೆವು.

ಇದೇ ಕಾರಣಕ್ಕೆ ಜನಕ್ಕೆ ಏನಾದರೂ ಸಹಾಯ ಮಾಡೋಣ ಅಂತ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು  ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಂತೇ ಬಿಜೆಪಿ ಜೋರಾಗಿ ಕೂಗಿ ವ್ಯಂಗ್ಯ ಮಾಡಿತು. ಈ ವೇಳೆ ಆಡಳಿತ ಪಕ್ಷದ ಸದಸ್ಯರೂ ತಿರುಗೇಟು ನೀಡಲು ಮುಂದಾದರು.

ಆಗ ಡಿಕೆ ಶಿವಕುಮಾರ್, ಕೇಳೋದಿದ್ರೆ ಕೇಳಿ. ನನಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರ ಹೇಳಲು ಕರೆದಿದ್ದಾರೆ ಅದಕ್ಕೆ ಉತ್ತರ ಕೊಡುತ್ತಿದ್ದೇನೆ ಎಂದರು. ಬಳಿಕ ಕೂಗುತ್ತಿದ್ದ ಸ್ವಪಕ್ಷ ಶಾಸಕರನ್ನೂ ಸುಮ್ಮನಾಗಿಸಿ ಮಾತು ಮುಂದುವರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

Ranya Rao: ರನ್ಯಾ ರಾವ್ ತಂದೆ ಐಪಿಎಸ್ ರಾಮಚಂದ್ರ ರಾವ್ ಬುಡಕ್ಕೇ ಬಂತು ಚಿನ್ನ ಕಳ್ಳಸಾಗಣಿಕೆ ಕೇಸ್