Select Your Language

Notifications

webdunia
webdunia
webdunia
webdunia

Ranya Rao: ರನ್ಯಾ ರಾವ್ ತಂದೆ ಐಪಿಎಸ್ ರಾಮಚಂದ್ರ ರಾವ್ ಬುಡಕ್ಕೇ ಬಂತು ಚಿನ್ನ ಕಳ್ಳಸಾಗಣಿಕೆ ಕೇಸ್

Ranya Rao-Ramachandra Rao

Krishnaveni K

ಬೆಂಗಳೂರು , ಮಂಗಳವಾರ, 11 ಮಾರ್ಚ್ 2025 (13:56 IST)
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಮಾಡುತ್ತಿದ್ದ ಪ್ರಕರಣ ಈಗ ಬಂಧಿತ ನಟಿ ರನ್ಯಾ ರಾವ್ ತಂದೆ ಐಪಿಎಸ್ ರಾಮಚಂದ್ರ ರಾವ್ ಬುಡಕ್ಕೇ ಬಂದಿದೆ.

ರನ್ಯಾ ರಾವ್ ಡಿಜಿಪಿ ರಾಮಚಂದ್ರ ರಾವ್ ಅವರ ಪುತ್ರಿ. ಹೀಗಾಗಿ ಆಕೆ ಬಂಧಿತರಾದ ಬೆನ್ನಲ್ಲೇ ಹಲವರು ತಂದೆಯ ಸಹಾಯವೂ ಇರಬಹುದು ಎಂದು ಅನುಮಾನಿಸಿದ್ದರು. ಆದರೆ ಈ ಬಗ್ಗೆ ಹೇಳಿಕೆ ನೀಡಿದ್ದ ರಾಮಚಂದ್ರ ರಾವ್, ನಾನು ಮತ್ತು ಮಗಳ ನಡುವೆ ಸಂಪರ್ಕವೇ ಇಲ್ಲದೇ ತುಂಬಾ ದಿನಗಳಾಗಿವೆ. ಮದುವೆಯಾದ ಬಳಿಕ ಆಕೆ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾಳೆ. ಈ ಘಟನೆ ನಮ್ಮ ಕುಟುಂಬಕ್ಕೇ ಕಳಂಕ ತಂದಿದೆ ಎಂದು ಭಾವನಾತ್ಮಕವಾಗಿ ಹೇಳಿಕೆ ಬಿಡುಗಡೆ ಮಾಡಿದ್ದರು.

ಇದೀಗ ರನ್ಯಾ ರಾವ್ ಪ್ರಕರಣದಲ್ಲಿ ಆಕೆಯ ತಂದೆ ರಾಮಚಂದ್ರ ರಾವ್ ಪಾತ್ರವಿದೆಯೇ ಎಂದು ತನಿಖೆ ನಡೆಸುವಂತೆ ಕರ್ನಾಟಕ ಗೃಹ ಇಲಾಖೆ ಆದೇಶ ನೀಡಿದೆ. ಇದೀಗ ಚಿನ್ನ ಕಳ್ಳಸಾಗಣಿಕೆ ಕೇಸ್ ನಲ್ಲಿ ರಾಮಚಂದ್ರ ರಾವ್ ಪಾತ್ರ ಏನಿದೆ ಎಂದು ತನಿಖೆ ನಡೆಸಲು ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗಿದೆ.

ಈ ಅಧಿಕಾರಿಗಳು ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ಸಲ್ಲಿಸಲಿದ್ದಾರೆ. ಇನ್ನು, ಬಂಧಿತ ರನ್ಯಾರನ್ನು ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಉದ್ಯಮಿಯೊಬ್ಬರ ಪುತ್ರ ತರುಣ್ ರಾಜು ಎಂಬಾತನನ್ನೂ ಬಂಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ವರ್ಷಕ್ಕೆ ಎಷ್ಟು ದಿನ ಅಂತಾನೇ ಗೊತ್ತಿಲ್ಲ: ವೈರಲ್ ಆದ ವಿಡಿಯೋ ಇಲ್ಲಿದೆ