Select Your Language

Notifications

webdunia
webdunia
webdunia
webdunia

ವಡೋದರಾ: ಅಪಘಾತಕ್ಕೂ ಕೆಲವೇ ಕ್ಷಣಗಳ ಮುನ್ನಾ ಮದ್ಯ ಸೇವಿಸಿದ್ದ ಕಾನೂನು ವಿದ್ಯಾರ್ಥಿ

ವಡೋದರಾ: ಅಪಘಾತಕ್ಕೂ ಕೆಲವೇ ಕ್ಷಣಗಳ ಮುನ್ನಾ ಮದ್ಯ ಸೇವಿಸಿದ್ದ ಕಾನೂನು ವಿದ್ಯಾರ್ಥಿ

Sampriya

ವಡೋದರಾ , ಸೋಮವಾರ, 17 ಮಾರ್ಚ್ 2025 (13:39 IST)
Photo Courtesy X
ವಡೋದರಾ: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ, ಒಬ್ಬರು ಸಾವಿಗೆ ಹಾಗೂ ನಾಲ್ವರ ಗಾಯಕ್ಕೆ ಕಾರಣವಾಗಿದ್ದಆರೋಪಿ ಅಪಘಾತ ನಡೆಸುವ ಮುನ್ನಾ ಮದ್ಯ ಸೇವಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಡೋದರಾ ಕಾರು ಅಪಘಾತದ ಆರೋಪಿ ರಕ್ಷಿತ್ ಚೌರಾಸಿಯಾ ಮಹಿಳೆಗೆ ಡಿಕ್ಕಿ ಹೊಡೆಯುವ ಮುನ್ನಾ  ಬಾಟಲಿಯಿಂದ ಮದ್ಯ ಸೇವಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿದೆ.

ವಡೋದರಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನೂ ಅಪಘಾತದ ಬಳಿಕ ಮದ್ಯದ ಅಮಲಿನಲ್ಲಿದ್ದ ಆರೋಪಿ, ಇನ್ನೊಂದು ಸುತ್ತು ಹೇಳುತ್ತಿರುವುದನ್ನು ಕಾಣಬಹುದು. ಇದೀಗ ಅಪಘಾತಕ್ಕೂ ಮುನ್ನಾ ಆರೋಪಿ ಮದ್ಯ ಸೇವಿಸುತ್ತಿರುವುದನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ.

20 ವರ್ಷದ ಕಾನೂನು ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ, ಅಪಘಾತಕ್ಕೂ ಮುನ್ನ ತನ್ನ ಸ್ನೇಹಿತ ಪ್ರಾಂಶು ಜೊತೆಗೆ ಮತ್ತೊಬ್ಬ ಸ್ನೇಹಿತನ ಮನೆಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ.

ರಕ್ಷಿತ್ ಮತ್ತು ಪ್ರಾಂಶು ಸ್ಕೂಟರ್‌ನಲ್ಲಿ ಬಂದು ಮನೆಗೆ ಪ್ರವೇಶಿಸುವ ಮೊದಲು ಸಂಭಾಷಣೆಯಲ್ಲಿ ತೊಡಗಿರುವುದನ್ನು ದೃಶ್ಯಗಳು ತೋರಿಸುತ್ತವೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ರಕ್ಷಿತ್ ಬಾಟಲಿಯಿಂದ ಕುಡಿಯುತ್ತಿರುವುದು ಕಂಡುಬಂದಿದೆ, ಆದರೂ ವಿಷಯಗಳು ಸ್ಪಷ್ಟವಾಗಿಲ್ಲ.


ಕಾರಿನಲ್ಲಿ ಹೊರಡುವ ಮೊದಲು ಇಬ್ಬರೂ ಸ್ಥಳದಲ್ಲಿ ಸುಮಾರು 45 ನಿಮಿಷಗಳ ಕಾಲ ಕಳೆದರು ಎಂದು ವರದಿಯಾಗಿದೆ, ರಕ್ಷಿತ್ ಚಾಲಕನ ಸೀಟಿಗೆ ಬದಲಾಯಿಸಿದರೆ, ಪ್ರಾಂಶು ಪ್ರಯಾಣಿಕರ ಪಕ್ಕಕ್ಕೆ ಹೋದರು.

Share this Story:

Follow Webdunia kannada

ಮುಂದಿನ ಸುದ್ದಿ

Kalpana Chawla Birth Anniversary: ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯಳ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು