Select Your Language

Notifications

webdunia
webdunia
webdunia
webdunia

ಕುಡಿದ ಅಮಲಿನಲ್ಲಿ ಮಹಿಳೆಗೆ ಢಿಕ್ಕಿ ಹೊಡೆದು ಸಾಯಿಸಿದ ವಡೋದರಾ ಯುವಕ ನೀಡಿದ ಕಾರಣ ಕೇಳಿದ್ರೆ ಶಾಕ್

Vadodara

Krishnaveni K

ವಡೋದರಾ , ಶನಿವಾರ, 15 ಮಾರ್ಚ್ 2025 (10:27 IST)
ವಡೋದರಾ: ಕುಡಿದ ಮತ್ತಿನಲ್ಲಿ ಸರಣಿ ಅಪಘಾತ ಮಾಡಿ ಮಹಿಳೆಯ ಸಾವಿಗೆ ಕಾರಣವಾದ ಯುವಕ ರಕ್ಷಿತ್ ಚೌರಾಸಿಯಾ ಈಗ ಕಾರಣ ನೀಡಿದ್ದು ಕೇಳಿದರೆ ಶಾಕ್ ಆಗುತ್ತೀರಿ.

ವಡೋದರಾದಲ್ಲಿ ಕುಡಿದ ಮತ್ತಿನಲ್ಲಿ ರಕ್ಷಿತ್ ಚೌರಾಸಿಯಾ ಎಂಬ ಕಾನೂನು ವಿದ್ಯಾರ್ಥಿ ಸರಣಿ ಅಪಘಾತ ಮಾಡಿದ್ದಲ್ಲದೆ, ಇನ್ನೊಂದು ರೌಂಡ್ ಎಂದು ಕಿರುಚಾಡಡುತ್ತಿದ್ದ ವಿಡಿಯೋ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಘಟನೆ ಬಳಿಕ ರಕ್ಷಿತ್ ನನ್ನು ಬಂಧಿಸಲಾಗಿತ್ತು. ಘಟನೆ ವೇಳೆ ರಕ್ಷಿತ್ ಕುಡಿದಿದ್ದ ಎನ್ನುವುದು ಖಚಿತವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ರಕ್ಷಿತ್ ನನ್ನು ಪೊಲೀಸರು ಈಗ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಆತ ಘಟನೆಗೆ ತಾನು ಕುಡಿದಿದ್ದಲ್ಲ, ರಸ್ತೆ ಗುಂಡಿಯಿಂದ ಅಪಘಾತವಾಗಿದ್ದು ಎಂದು ನೆಪ ಹೇಳಿದ್ದಾನೆ.

ಆದರೆ ಪೊಲೀಸರಿಗೆ ಹೇಳಿಕೆ ನೀಡಿದ ರಕ್ಷಿತ್ ನನ್ನ ಕಾರು ಓವರ್ ಸ್ಪೀಡ್ ಇರಲಿಲ್ಲ. ಕೇವಲ 50 ಕಿ.ಮೀ. ವೇಗದಲ್ಲಿತ್ತಷ್ಟೇ. ರಸ್ತೆ ಗುಂಡಿಯಿಂದಾಗಿ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದೆ ಎಂದು ನೆಪ ಹೇಳಿದ್ದಾನೆ. ನಾನು ಕುಡಿದಿರಲಿಲ್ಲ. ನಾನು ಸಂತ್ರಸ್ತ ಮಹಿಳೆಯ ಕುಟುಂಬದವರನ್ನು ಭೇಟಿ ಮಾಡಲು ಬಯಸುತ್ತೇನೆ. ಯಾಕೆಂದರೆ ಇದು ನನ್ನ ತಪ್ಪಾಗಿತ್ತು. ಅವರು ಏನು ಬಯಸುತ್ತಾರೋ ನನಗೆ ಅದೇ ಆಗಲಿ ಎಂದಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ನೀರಿನ ದರವೂ ಹೆಚ್ಚಳ: ಬೆಂಗಳೂರಿಗರಿಗೆ ಬೆಲೆ ಏರಿಕೆ ಬರೆ ಮೇಲೆ ಬರೆ