Select Your Language

Notifications

webdunia
webdunia
webdunia
webdunia

ಮಧುಮೇಹಿಗಳಿಗೆ ಗುಡ್‌ನ್ಯೂಸ್‌: ಡಯಾಬಿಟಿಸ್​​ನ ಔಷಧ ಬೆಲೆಯಲ್ಲಿ ಶೇ 90ರಷ್ಟು ಇಳಿಕೆ

ಮಧುಮೇಹಿಗಳಿಗೆ ಗುಡ್‌ನ್ಯೂಸ್‌: ಡಯಾಬಿಟಿಸ್​​ನ ಔಷಧ ಬೆಲೆಯಲ್ಲಿ ಶೇ 90ರಷ್ಟು ಇಳಿಕೆ

Sampriya

ನವದೆಹಲಿ , ಶುಕ್ರವಾರ, 14 ಮಾರ್ಚ್ 2025 (15:42 IST)
Photo Courtesy X
ನವದೆಹಲಿ: ಮಧುಮೇಹ ರೋಗಿಗಳಿಗೆ ಸಿಹಿ ಸುದ್ದಿ. ಡಯಾಬಿಟಿಸ್​​ ರೋಗಿಗಳು ಸೇವಿಸುತ್ತಿದ್ದ ಪ್ರಮುಖ ಔಷಧವೊಂದರ ಬೆಲೆಯಲ್ಲಿ ಶೇ 90ರಷ್ಟು ಕಡಿತ ಮಾಡಲಾಗಿದೆ.

ಸಕ್ಕರೆ ಕಾಯಿಲೆ ಇರುವವರು ಬಳಸುವ ಎಂಪಾಗ್ಲಿಪ್ಲೋಜಿನ್ ಮಾತ್ರೆಯ ಬೆಲೆಯಲ್ಲಿ ಶೇಕಡಾ 90ರಷ್ಟು ಕಡಿತವಾಗಿದೆ. ಈ ಮೊದಲು 1 ಮಾತ್ರೆಗೆ ₹ 60 ಇತ್ತು. ಇದೀಗ ಅದರ ದರ ಕೇವಲ ₹5ಕ್ಕೆ ಇಳಿಕೆಯಾಗಿದೆ..

ಎಂಪಾಗ್ಲಿಪ್ಲೋಜಿನ್ ಔಷಧದ ಮೇಲೆ ತಯಾರಿಕಾ ಕಂಪನಿಯಾದ ಬೋರಿಂಜರ್ ಇಂಗ್ಲಿಹೈಂ ಹೊಂದಿದ್ದ ಪೇಟೆಂಟ್ ಅವಧಿ ಮಾರ್ಚ್‌ಗೆ ಮುಕ್ತಾಯವಾಗಿದೆ. ಹೀಗಾಗಿ ಹಲವು ಕಂಪನಿಗಳು ಇದರ ಜನೆರಿಕ್ ಮಾದರಿಯ ಔಷಧಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದ ಭಾರತದಲ್ಲಿನ ಕೋಟ್ಯಂತರ ರೋಗಿಗಳಿಗೆ ಬೆಲೆ ಇಳಿಕೆಯು ಹೆಚ್ಚು ಅನುಕೂಲವಾಗಲಿದೆ.  

ದೆಹಲಿ ಮೂಲದ ಮ್ಯಾನ್‌ಕೈಂಡ್ ಫಾರ್ಮಾ 1 ಮಾತ್ರೆಗೆ ₹5.5ರಿಂದ ₹ 13.5ರ ವರೆಗೆ ಇರಿಸಿದೆ. ಮುಂಬೈ ಮೂಲದ ಗ್ಲೆನ್‌ಮಾರ್ಕ್ ₹11ರಿಂದ ₹15 ರೂಪಾಯಿವರೆಗೆ ಬೆಲೆ ಇರಿಸಿದೆ. ಆಲೈಂ ಕಂಪನಿಯು ಮಾರುಕಟ್ಟೆ ದರಕ್ಕಿಂತ ಶೇಕಡಾ ₹ 80 ರಷ್ಟು ಬೆಲೆ ಕಡಿಮೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಅಮರಾವತಿ ಎಕ್ಸ್ ಪ್ರೆಸ್ ರೈಲಿಗೆ ಸಿಕ್ಕ ಬೃಹತ್ ಲಾರಿ ಪೀಸ್ ಪೀಸ್: ವಿಡಿಯೋ