Select Your Language

Notifications

webdunia
webdunia
webdunia
webdunia

ಕಳಪೆ ಗುಣಮಟ್ಟದ 9 ಇಂಜೆಕ್ಷನ್ ಗಳು ಬ್ಯಾನ್: ಯಾವೆಲ್ಲಾ ಇಂಜೆಕ್ಷನ್ ಇಲ್ಲಿದೆ ವಿವರ

Injection

Krishnaveni K

ಬೆಂಗಳೂರು , ಶನಿವಾರ, 22 ಫೆಬ್ರವರಿ 2025 (10:34 IST)
Photo Credit: X
ಬೆಂಗಳೂರು: ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 9 ಇಂಜೆಕ್ಷನ್ ಗಳನ್ನು ರಾಜ್ಯ ಆರೋಗ್ಯ ಇಲಾಖೆ ನಿಷೇಧಿತ ಪಟ್ಟಿಗೆ ಸೇರಿಸಿದೆ. ಆ ಇಂಜೆಕ್ಷನ್ ಗಳು ಯಾವುವು ಇಲ್ಲಿದೆ ಪಟ್ಟಿ.

ಅಸುರಕ್ಷಿತ ಮತ್ತು ಗುಣಮಟ್ಟ ಪರಿಶೀಲಿಸಲು ಈ ಇಂಜೆಕ್ಷನ್ ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ನಿರೀಕ್ಷಿತ ಗುಣಮಟ್ಟ ಹೊಂದಿಲ್ಲ ಎಂಬ ಕಾರಣಕ್ಕೆ ಈ ಇಂಜೆಕ್ಷನ್ ಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ ಸಾಮಾನ್ಯ ಜ್ವರಕ್ಕೆ ನೀಡಲಾಗುವ ಇಂಜೆಕ್ಷನ್ ಕೂಡಾ ಸೇರಿದೆ.

ಈ ಔಷಧಿಗಳನ್ನು ಉತ್ಪಾದಿಸುವ ಕಂಪನಿಗಳಲ್ಲಿ ಔಷಧಿ ಉತ್ಪಾದನಾ ಪದ್ಧತಿಯ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಬೇಕು ಮತ್ತು ಅಲ್ಲಿಯವರೆಗೆ ಈ ಕಂಪನಿಗಳ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶ ನೀಡಿದ್ದಾರೆ.

ನಿಷೇಧಿತ 9 ಇಂಜೆಕ್ಷನ್ ಗಳು ಮತ್ತು ಅವುಗಳ ಉಪಯೋಗ

  1. ಮೆಟ್ರೋನಿಡಜೋಲ್: ಬ್ಯಾಕ್ಟೀರಿಯಾ ಸೋಂಕಿಗೆ
  2. ಮೆಟ್ರೊನಿಡಜೋಲ್ (ಐಎಚ್ಎಲ್ ಲೈಫ್ ಸೈನ್ಸಸ್): ಬ್ಯಾಕ್ಟೀರಿಯಾ ಸೋಂಕು ತಡೆ
  3. ಡಿಕ್ಲೊಫೆನಕ್ ಸೋಡಿಯಂ: ನೋವು ನಿವಾರಕ ಇಂಜೆಕ್ಷನ್
  4. ಡೆಕ್ರೋಟ್ರೋಸ್ ಇಂಜೆಕ್ಷನ್: ರಕ್ತದಲ್ಲಿ ಸಕ್ಕರೆ ಮತ್ತು ಸೋಡಿಯಂ ಅಂಶ ಕಡಿಮೆ ಮಾಡಲು
  5.   ಫ್ರುಸ್ ಮೈಡ್ ಇಂಜೆಕ್ಷನ್: ಆರಲ್ ಔಷಧಿ ತೆಗೆದುಕೊಳ್ಳಲು ಸಾಧ್ಯವಾಗದವರಿಗೆ
  6. ಪಿಪರೆಸಿಲಿಯನ್ ಆಂಡ್ ತಜೊಬೆಕ್ಚಂ: ನಿಮೋನಿಯಾ, ಚರ್ಮ ಮತ್ತು ಸ್ತ್ರೀರೋಗ
  7. ಕ್ಯಾಲ್ಶಿಯಂ ಗ್ಲೊಕೊನ್ಕೆಟ್:  ಕ್ಯಾಲ್ಶಿಯಂ ಪ್ರಮಾಣ ಹೆಚ್ಚಿಸಲು
  8. ಒಂಡಾನ್ಸರ್ಟನ್ ಕ್ಯಾನ್ಸರ್: ಔಷಧಿಯಿಂದ ವಾಕರಿಕೆ ಆಗುತ್ತಿದ್ದರೆ
  9. ಅಟ್ರೋಪ್ಚೆನ್ ಸಲ್ಫೇಟ್: ವಿಷ ಉಪಶಮನಕ್ಕೆ

Share this Story:

Follow Webdunia kannada

ಮುಂದಿನ ಸುದ್ದಿ

ಮದರಸಾದಲ್ಲಿ ಹೆಣ್ಣು ಮಕ್ಕಳಿಗೆ ಕಾಟ ಕೊಡುತ್ತಿದ್ದ ಶಿಕ್ಷಕ ಅರೆಸ್ಟ್: ವಿಡಿಯೋ