Select Your Language

Notifications

webdunia
webdunia
webdunia
webdunia

Karnataka Weather: ಕರಾವಳಿ, ಬೆಂಗಳೂರಿನಲ್ಲಿ ದಾಖಲೆ ಸನಿಹದಲ್ಲಿ ತಾಪಮಾನ

Temperature

Krishnaveni K

ಬೆಂಗಳೂರು , ಶನಿವಾರ, 22 ಫೆಬ್ರವರಿ 2025 (09:41 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ತಾಪಮಾನ ಈಗ ದಾಖಲೆ ಬರೆಯಲು ಸಜ್ಜಾಗಿದೆ. ಕರ್ನಾಟಕದ ಲೇಟೆಸ್ಟ್  ಹವಾಮಾನ ವರದಿ ಇಲ್ಲಿದೆ ನೋಡಿ.

ಫೆಬ್ರವರಿ ಮೊದಲ ವಾರದಿಂದಲೇ ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹಿಂದೆಂದೂ ಕಾಣದಂತಹ ಸೂರ್ಯನ ಪ್ರಖರತೆ ಕಾಣಬಹುದಾಗಿದೆ. ನಗರದಲ್ಲಿ ಈ ಬಾರಿ ತಾಪಮಾನ 40 ಡಿಗ್ರಿಗಿಂತಲೂ ಹೆಚ್ಚಾಗಲಿದೆ ಎಂದು  ಹವಾಮಾನ ವರದಿ ಹೇಳುತ್ತಿದೆ.

ಈಗಾಗಲೇ ಬೆಂಗಳೂರಿನ ತಾಪಮಾನ 32 ಡಿಗ್ರಿಯಷ್ಟಿದ್ದು ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಬೆಂಗಳೂರು ಕೂಲ್ ಪ್ರದೇಶ ಎಂದೇ ಹೇಳಲಾಗುತ್ತದೆ. ಆದರೆ ಈಗ ಕರಾವಳಿಗೂ ಬೆಂಗಳೂರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ.

ಈ ಬಾರಿ ತಾಪಮಾನ ವಿಚಾರದಲ್ಲಿ ಕರಾವಳಿ ಮತ್ತು ಬೆಂಗಳೂರು ದಾಖಲೆ ಬರೆಯಲಿದೆ ಎಂದೇ ಹೇಳಲಾಗಿದೆ. ಕರಾವಳಿಯಲ್ಲಿ ತಾಪಮಾನ 50 ಡಿಗ್ರಿ ಆಸುಪಾಸು ಬಂದು ನಿಲ್ಲುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದು ದಾಖಲೆಯಾಗಲಿದೆ. ಹೀಗಾಗಿ ತಾಪಮಾನ ಎದುರಿಸಲು ಈಗಲೇ ಸಜ್ಜಾಗುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿ ಸೊನ್ನೆ: ಆರ್ ಅಶೋಕ್