Select Your Language

Notifications

webdunia
webdunia
webdunia
webdunia

ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು ನೀಡಿ ಮಹತ್ವದ ಆದೇಶ

doctor
ಬೆಂಗಳೂರು: ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರಿಗೆ ದಯಾಮರಣ ಹೊಂದಲು ಅವಕಾಶ ನೀಡಿ ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಆದೇಶ ನೀಡಿದೆ.

ಮಾರಣಾಂತಿಕ ರೋಗಗಳಿಂದ ಬಳಲುತ್ತಿದ್ದು ಜೀವನಪೂರ್ತಿ ಚೇತರಿಕೆಗೆ ಅವಕಾಶವೇ ಇಲ್ಲದ ರೋಗಿಗಳಿಗೆ ದಯಾಮರಣ ಹೊಂದಲು ಅವಕಾಶ ಕಲ್ಪಿಸಲಾಗಿದೆ. ದಯಾಮರಣಕ್ಕೆ ಒಪ್ಪಿಗೆ ನೀಡಲು ಇಬ್ಬರು ವೈದ್ಯರನ್ನೊಳಗೊಂಡ ಸಮಿತಿಯನ್ನು ನಿಯೋಜಿಸಲಾಗುತ್ತದೆ.

ಈ ಮೂಲಕ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನವನ್ನು ಪಾಲಿಸಿದೆ.  ಇತ್ತೀಚೆಗಿನ ದಿನಗಳಲ್ಲಿ ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರು ದಯಾ ಮರಣಕ್ಕೆ ಮನವಿ ಸಲ್ಲಿಸುತ್ತಿರುವ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಈ ಮಹತ್ವದ ಆದೇಶ ಹೊರಡಿಸಲಾಗಿದೆ.

ಮೊದಲು ರೋಗಿಯ ಕುಟುಂಬಸ್ಥರು ಮನವಿ ಮಾಡಬೇಕಾಗುತ್ತದೆ. ಇದನ್ನು ಪ್ರೈಮರಿ ಬೋರ್ಡ್ ಪರಿಶೀಲನೆ ನಡೆಸುತ್ತದೆ. ನಂತರ ಸೆಕೆಂಡರಿ ಬೋರ್ಡ್ ಗೆ ಮನವಿಯನ್ನು ಹಸ್ತಾಂತರಿಸುತ್ತದೆ. ಎಲ್ಲಾ ವರದಿಗಳನ್ನು ಪರಿಶೀಲಿಸಿ ಈ ಬೋರ್ಡ್ ಕೋರ್ಟ್ ಗೆ ಮನವಿ ಸಲ್ಲಿಸುತ್ತದೆ. ಕೋರ್ಟ್ ಅನುಮತಿ ನೀಡಿದರೆ ರೋಗಿಯ ಜೀವ ರಕ್ಷಕವನ್ನು ತೆಗೆಯಲು ಅವಕಾಶ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನಾರ್ದನ ರೆಡ್ಡಿ ವಿರುದ್ಧ ಮುನಿಸಿಕೊಂಡ ಶ್ರೀರಾಮುಲು ಅವರ ಹೊಸ ಡಿಮ್ಯಾಂಡ್‌ ಏನು ಗೊತ್ತಾ