Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಹೇಳಿದವರೇ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರೆ ಎಂದ ಯತ್ನಾಳ್: ಡಿಕೆಶಿ ಪ್ರತಿಕ್ರಿಯೆ ಏನಿತ್ತು

DK Shivakumar

Krishnaveni K

ಬೆಂಗಳೂರು , ಶುಕ್ರವಾರ, 31 ಜನವರಿ 2025 (12:19 IST)
ಬೆಂಗಳೂರು: ಡಿಕೆ ಶಿವಕುಮಾರ್ ಹೇಳಿದವರೇ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾಲಿ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಯತ್ನಾಳ್, ಈ ಮೊದಲಿನಿಂದಲೂ ವಿಜಯೇಂದ್ರ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ. ಡಿಕೆಶಿ ಹೇಳಿದವರೇ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಟಾಂಗ್ ನೀಡಿದ್ದರು.


ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಇಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಉತ್ತರಿಸಿದ ಅವರು ‘ನಾನ್ಯಾಕ್ರೀ ಅವರ ಪಾರ್ಟಿ ವಿಚಾರಕ್ಕೆ ಹೋಗಲಿ? ನಾನು ವಕ್ತಾರನಲ್ಲ’ ಎಂದಿದ್ದಾರೆ.

ನಮಗೆ ನಮ್ಮ ಪಾರ್ಟಿಯಲ್ಲೇ ಬೇಕಾದಷ್ಟು ಕೆಲಸ ಇದೆ. ಬಿಜೆಪಿಯವರಿಗೆ ಈಗ ಮಾಡಕ್ಕೆ ಕೆಲಸ ಇಲ್ಲ. ಅವರಿಗೆ ಜನರು ವಿರೋಧ ಪಕ್ಷದವರಾಗಿ ಕೆಲಸ ಕೊಟ್ಟಿದ್ದಾರೆ. ಅದನ್ನು ಮಾಡೋದು ಬಿಟ್ಟು ಏನೇನೋ ಆರೋಪ ಮಾಡ್ತಿರ್ತಾರೆ. ಅವರದ್ದು ಯಾವತ್ತೂ ಇದ್ದಿದ್ದೇ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಆಸ್ತಿಕ, ತಂದೆಯವರು ನಾಸ್ತಿಕ, ಹಿಂದೂ ಧರ್ಮದಲ್ಲಿರುವ ನಾಸ್ತಿಕರು ಟೀಕೆ ಮಾಡ್ತಾರೆ: ಯತೀಂದ್ರ ಸಿದ್ದರಾಮಯ್ಯ