Publish Date: Mon, 24 Mar 2025 (19:47 IST)
Updated Date: Mon, 24 Mar 2025 (19:51 IST)
ಬೆಂಗಳೂರು: ಮಾರಕಾಸ್ತ್ರ ಹಿಡಿದು ಸಾರ್ವಜನಿಕವಾಗಿ ನಡೆದು ಚರ್ಚೆಗೆ ಕಾರಣವಾಗಿದ್ದ ನಟ ವಿನಯ್ ಗೌಡ ಹಾಗೂ ರಜತ್ ಕಿಶನ್ ಅವರನ್ನು ಬಂಧಿಸಿದ್ದಾರೆ. ಈ ಮೂಲಕ ಕೈಯಲ್ಲಿ ಲಾಂಗ್ ಹಿಡಿದು ಪೋಸ್ ಕೊಟ್ಟಿದ್ದ ವಿನಯ್ ಗೌಡ, ರಜತ್ ಕಿಶನ್‌ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ವಿಚಾರಣೆಗೆ ಕರೆದಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ವಿನಯ್ ಗೌಡ ಹಾಗೂ ರಜತ್ ಕಿಶನ್ ಇಬ್ಬರು ಕೈಯಲ್ಲಿ ಲಾಂಗು, ಕಣ್ಣಿಗೆ ಗ್ಲಾಸ್ ಹಾಕಿಕೊಂಡು ಸಖತ್ ಪೋಸ್ ಕೊಟ್ಟಿದ್ದರು. ಕೈಯಲ್ಲಿ ಲಾಂಗ್ ಹಿಡಿದು ವಿಡಿಯೋ ಕೂಡ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು.
ಇದರ ಬೆನ್ನಲ್ಲೆ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪೋಲಿಸರು ಎಫ್ಐಆರ್ ದಾಖಲಿಸಿದ್ದು, ವಿನಯ್ ಗೌಡ ಹಾಗೂ ರಜತ್ ಅವರಿಗೆ ಮೌಖಿಕವಾಗಿ ವಿಚಾರಣೆಗೆ ಹಾಜರಾಗುವಂತೆ ಬಸವೇಶ್ವರ ನಗರ ಪೊಲೀಸರು ಸೂಚನೆಯನ್ನು ಕೊಟ್ಟಿದ್ದರು.
ತನಿಖಾಧಿಕಾರಿಗೆ ಆರೋಪಿಗಳು ನೀಡಿದ ವಿವರಣೆಯ ಆಧಾರದ ಮೇಲೆ ಬಂಧನ ಮಾಡಲಾಗಿದೆ.