Publish Date: Mon, 30 Nov 2020 (10:04 IST)
Updated Date: Mon, 30 Nov 2020 (10:07 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿನ್ನೆಯಷ್ಟೇ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದರು. ರಮ್ಯಾ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭ ಕೋರಿದ್ದಾರೆ.
ಕಿಚ್ಚ ಸುದೀಪ್, ರಕ್ಷಿತಾ ಪ್ರೇಮ್ ಸೇರಿದಂತೆ ಸೆಲೆಬ್ರಿಟಿಗಳೂ ರಮ್ಯಾಗೆ ಶುಭ ಕೋರಿದ್ದರು. ತಮಗೆ ಶುಭ ಕೋರಿದವರಿಗೆಲ್ಲಾ ರಮ್ಯಾ ಪ್ರತ್ಯೇಕವಾಗಿ ಧನ್ಯವಾದ ಸಲ್ಲಿಸಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಉದ್ದೇಶಿಸಿ ಸಂದೇಶವನ್ನು ಬರೆದಿದ್ದು, ನಿಮ್ಮೆಲ್ಲರ ಶುಭ ಹಾರೈಕೆಗೆ ನನ್ನ ಹೃದಯ ತುಂಬಿ ಬಂದಿದೆ ಎಂದಿದ್ದಾರೆ.