Select Your Language

Notifications

webdunia
webdunia
webdunia
webdunia

ನಿಮ್ಮನ್ನು ಮತ್ತೆ ಜತೆಯಾಗಿ ನೋಡುವುದೇ ಖುಷಿ: ದಿಗ್ಗಿ-ಆಂಡಿಗೆ ಕಿಚ್ಚ ಸುದೀಪ್ ಹೊಗಳಿಕೆ

ನಿಮ್ಮನ್ನು ಮತ್ತೆ ಜತೆಯಾಗಿ ನೋಡುವುದೇ ಖುಷಿ: ದಿಗ್ಗಿ-ಆಂಡಿಗೆ ಕಿಚ್ಚ ಸುದೀಪ್ ಹೊಗಳಿಕೆ
ಬೆಂಗಳೂರು , ಸೋಮವಾರ, 30 ನವೆಂಬರ್ 2020 (09:05 IST)
ಬೆಂಗಳೂರು: ದಿಗಂತ್ ಮಂಚಾಲೆ ಮತ್ತು ಐಂದ್ರಿತಾ ದಂಪತಿ ಈಗ ಮತ್ತೆ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಸಿನಿಮಾವೊಂದರ ಚಿತ್ರೀಕರಣದಲ್ಲಿ ಇಬ್ಬರೂ ಮಲೆನಾಡಿನಲ್ಲಿ ಬ್ಯುಸಿಯಾಗಿದ್ದಾರೆ.


ಐಂದ್ರಿತಾ ಈ ಸಿನಿಮಾದ ಚಿತ್ರೀಕರಣವೊಂದರ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ‘ನನ್ನ ಆಫ್ ಸ್ಕ್ರೀನ್ ಲವ್ ಜತೆಗೆ ಮತ್ತೆ ಆನ್ ಸ್ಕ್ರೀನ್ ನಲ್ಲಿ 8 ವರ್ಷಗಳ ಬಳಿಕ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗೆ ಕಿಚ್ಚ ಸುದೀಪ್ ಕಾಮೆಂಟ್ ಮಾಡಿದ್ದು ‘ನೀವಿಬ್ಬರೂ ಕಮ್ ಬ್ಯಾಕ್ ಮಾಡುತ್ತಿರುವುದು, ಮತ್ತೆ ಜತೆಯಾಗಿ ನೋಡುತ್ತಿರುವುದೇ ಖುಷಿ’ ಎಂದು ಇಬ್ಬರಿಗೂ ವಿಶ್ ಮಾಡಿದ್ದಾರೆ. ಇನ್ನು, ಕಿಚ್ಚ ಸುದೀಪ್ ಹೊಗಳಿಕೆಗೆ ಆಂಡಿ-ದಿಗ್ಗಿ ಜೋಡಿ ಧನ್ಯವಾದವನ್ನೂ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ನಲ್ಲಿ ಅನುಯಾಯಿಗಳ ಮೂಲಕ ಅಗ್ರ ಸ್ಥಾನಕ್ಕೇರಿದ ನಟ ಪ್ರಭಾಸ್