Publish Date: Sat, 28 Nov 2020 (09:02 IST)
Updated Date: Sat, 28 Nov 2020 (09:04 IST)
ಬೆಂಗಳೂರು: ನಟ ದಿಗಂತ್ ಮಂಚಾಲೆ ಇದೀಗ ತವರು ತೀರ್ಥ ಹಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ. ಕಾರಣ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಸಿನಿಮಾ ಶೂಟಿಂಗ್.
ತಮ್ಮ ತವರೂರಿನ ಹಚ್ಚಹಸಿರಿನ ನಡುವೆ ಶೂಟಿಂಗ್ ಎಂಜಾಯ್ ಮಾಡುತ್ತಿರುವ ದಿಗಂತ್ ಇದರ ಜತೆಗೆ ಅಲ್ಲಿನ ರಸ್ತೆಗಳಲ್ಲೂ ತಮ್ಮ ಮೆಚ್ಚಿನ ಸೈಕಲ್ ರೈಡಿಂಗ್ ಮಾಡುತ್ತಿದ್ದಾರೆ. ಇವರಿಗೆ ಪತ್ನಿ, ನಟಿ ಐಂದ್ರಿತಾ ಕೂಡ ಸಾಥ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಐಂದ್ರಿತಾ-ದಿಗಂತ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ನೈಜ ಕತೆಯನ್ನಾಧರಿಸಿದ ಈ ಸಿನಿಮಾ ಶೂಟಿಂಗ್ ಸದ್ಯದಲ್ಲೇ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.