ಬೆಂಗಳೂರು: ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾಗಾಗಿ ವರ್ಕೌಟ್ ಮಾಡಿ ದೇಹ ಹುರಿಗೊಳಿಸಿದ್ದರು. ಅದಾದ ಬಳಿಕ ಮತ್ತೆ ಸುದೀಪ್ ಈಗ ಮತ್ತೆ ಜಿಮ್ ನಲ್ಲಿ ದೇಹ ಹುರಿಗೊಳಿಸಲು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ದೇಹ ದಾರ್ಡ್ಯ ಪ್ರದರ್ಶಿಸಿರುವ ಸುದೀಪ್ ಒಳ್ಳೆಯ ಆಹಾರ, ಶಿಸ್ತಿನ ಜೀವನ ಶೈಲಿ, ಕೊನೆಗೂ ಅದಕ್ಕೆ ಫಲ ಸಿಕ್ತು. ತುಂಬಾ ಸಮಯದ ಬಳಿಕ ವರ್ಕೌಟ್ ಆರಂಭಿಸಿದ್ದೇನೆ. ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ. ಕೊನೆಯ ಹಂತದ ಚಿತ್ರೀಕರಣ ಡಿಸೆಂಬರ್ 4 ರಿಂದ ಆರಂಭವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು, ಕಿಚ್ಚ ಸುದೀಪ್ ಸಿಕ್ಸ್ ಪ್ಯಾಕ್ ನೋಡಿ ನೆಟ್ಟಿಗರು ವಾವ್ ಎನ್ನುತ್ತಿದ್ದಾರೆ.