Publish Date: Fri, 27 Nov 2020 (09:58 IST)
Updated Date: Fri, 27 Nov 2020 (09:59 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಎರಡನೇ ಹಂತದ ಚಿತ್ರೀರಕರಣಕ್ಕೆ ಅಣಿಯಾಗುತ್ತಿದೆ.
ಎರಡನೇ ಹಂತದ ಚಿತ್ರೀಕರಣ ನವಂಬರ್ 30 ರಿಂದ ಆರಂಭವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ 20 ದಿನಗಳ ಕಾಲ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಮೈಸೂರಿನಲ್ಲಿ ಮೊದಲ ಹಂತ ಮುಕ್ತಾಯಗೊಂಡಿತ್ತು.