Publish Date: Wed, 25 Nov 2020 (10:49 IST)
Updated Date: Wed, 25 Nov 2020 (10:50 IST)
ಬೆಂಗಳೂರು: ಕಿಚ್ಚ ಸುದೀಪ್ ಮೊನ್ನೆಯಷ್ಟೇ ಫ್ಯಾಂಟಮ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ಮುಕ್ತಾಯವಾದ ಬಗ್ಗೆ ಮಾಹಿತಿ ನೀಡಿದ್ದರು. ಈಗ ಅಂತಿಮ ಹಂತದ ಚಿತ್ರೀಕರಣ ಕೇರಳದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಫ್ಯಾಂಟಮ್ ತಂಡ ಕೇರಳದ ಕಡೆಗೆ ಪ್ರಯಾಣ ಬೆಳೆಸಲಿದೆ. ಮುಂದಿನ ತಿಂಗಳು ಆರಂಭದಲ್ಲೇ ಕೇರಳದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬಳಿಕ ಹಾಡಿನ ಚಿತ್ರೀಕರಣ ಬಾಕಿಯಾಗಲಿದೆ. ಇದು ಬೆಂಗಳೂರಿನಲ್ಲೇ ವಿಶೇಷ ಸೆಟ್ ನಲ್ಲಿ ನಡೆಯುವ ಸಾಧ್ಯತೆಯಿದೆ.