Publish Date: Wed, 25 Nov 2020 (09:09 IST)
Updated Date: Wed, 25 Nov 2020 (09:12 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಕನ್ನಡದ ಜತೆಗೆ ಬೇರೆ ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ಸಾಮಾನ್ಯವಾಗಿದೆ. ಅದೇ ರೀತಿ ಬೇರೆ ಭಾಷೆಯ ಸಿನಿಮಾಗಳೂ ಕನ್ನಡಕ್ಕೆ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಎಗ್ಗಿಲ್ಲದೇ ಬರುತ್ತಿದೆ. ಇದರ ಬಗ್ಗೆ ನಟ ಜಗ್ಗೇಶ್ ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಿರುವ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ನಮ್ಮನ್ನು ಉದ್ದಾರ ಮಾಡಲ್ಲ. ಇದರಿಂದ ನಮ್ಮ ಕನ್ನಡಿಗರಿಗೆ ಕೆಲಸವಿಲ್ಲದಂತಾಗಿದೆ. ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ ಹಾಗಿದೆ. ಮೊದಲು ನಮ್ಮತನವನ್ನು ಉಳಿಸಿಕೊಳ್ಳೋಣ. ಇಲ್ಲದೇ ಹೋದರೆ ಅನ್ಯರ ಮನೆ ಬಾಗಿಲ ಮುಂದೆ ಮನೆ ಕಾಯುವ ಕೆಲಸ ಮಾಡಬೇಕಾದೀತು ಎಂದು ಜಗ್ಗೇಶ್ ಕಿಡಿ ಕಾರಿದ್ದಾರೆ.