Publish Date: Sun, 29 Nov 2020 (09:51 IST)
Updated Date: Sun, 29 Nov 2020 (09:54 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಇಂದು ಜನ್ಮದಿನದ ಸಂಭ್ರಮ. ರಮ್ಯಾ ಬರ್ತ್ ಡೇಗೆ ರಕ್ಷಿತಾ ಶುಭಾಶಯ ಕೋರಿದ್ದಾರೆ.
ನಿಮಗೆಲ್ಲಾ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ಇಬ್ಬರ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನುವ ಹಾಗಿತ್ತು. ಆದರೆ ಈಗ ಅದೆಲ್ಲಾ ಬದಲಾಗಿದೆ. ರಕ್ಷಿತಾ-ರಮ್ಯಾ ಈಗ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರು. ಆಗಾಗ ತಮ್ಮ ಪೋಸ್ಟ್ ಗಳಿಗೆ ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ.
ಇದೀಗ ರಕ್ಷಿತಾ ರಮ್ಯಾಗೆ ಬರ್ತ್ ಡೇ ನಿಮಿತ್ತ ವಿಶೇಷ ಸಂದೇಶ ಬರೆದಿದ್ದು, ನನ್ನ ಹಾಗಿರುವ ಆಕ್ರಮಣಕಾರಿ ಸ್ವಭಾವದ ವ್ಯಕ್ತಿಯಿಂದ ನಿನ್ನ ಹಾಗಿರುವ ಆಕ್ರಮಣಕಾರಿ ಸ್ವಭಾವದ ವ್ಯಕ್ತಿಗೆ ಶುಭಾಶಯ. ಭರ್ಜರಿಯಾಗಿ ಸಂಭ್ರಮಾಚರಿಸು. ನಾವಿಬ್ಬರೂ ಮತ್ತೆ ಜತೆಯಾಗಿ ಫೋಟೋ ತೆಗೆಸಿಕೊಂಡು ಸಂಭ್ರಮಿಸುವವರೆಗೆ ಎಂದು ರಕ್ಷಿತಾ ವಿಶಿಷ್ಟವಾಗಿ ಸಂದೇಶ ಬರೆದಿದ್ದಾರೆ.