Publish Date: Sat, 28 Nov 2020 (10:21 IST)
Updated Date: Sat, 28 Nov 2020 (10:22 IST)
ಬೆಂಗಳೂರು: ಆತ ಸಿಂಹದ ಮರಿ, ಏನೇ ಮಾಡಿದ್ರೂ ವಿಶ್ವ ಕನ್ನಡಿಗರು ಅಪ್ಪಿಕೊಳ್ತಾರೆ.. ಹೀಗಂತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಗ್ಗೆ ನವರಸನಾಯಕ ಜಗ್ಗೇಶ್ ಹೇಳಿಕೆ ನೀಡಿದ್ದಾರೆ.
ಪುನೀತ್ ಅಭಿನಯದ ಪವರ್ ಆಫ್ ಯೂಥ್ ಹಾಡಿನ ಪ್ರೋಮೋ ಬಿಡುಗಡೆಯಾಗಿದ್ದನ್ನು ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಜಗ್ಗೇಶ್ ಗಮನಸೆಳೆದಿದ್ದರು. ಇದಕ್ಕೆ ಜಗ್ಗೇಶ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಶಬ್ಧ ಮಾಡದೇ ನಾಡದೇವಿಯ ಹೊರುವ ಅರ್ಜುನನಂತೆ ಆನೆ. ನನ್ನ ಯಜಮಾನನ ಮುದ್ದಿನ ಮಗ. ಜೊತೆಗೆ ನನ್ನ ಹೆಮ್ಮೆಯ ಹುಡುಗ ಸಂತೋಷ ಆನಂದ್ ರಾಮನ ಸಂಯೋಗ. ಅವ ಮುಟ್ಟಿದ್ದೆಲ್ಲಾ ಚಿನ್ನ ಎಂದು ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.