Publish Date: Sat, 28 Nov 2020 (09:30 IST)
Updated Date: Sat, 28 Nov 2020 (09:32 IST)
ಬೆಂಗಳೂರು: ಪ್ಯಾನ್ ಇಂಡಿಯಾ ಸಿನಿಮಾ ಮಾಡುವವರ ವಿರುದ್ಧ ಹೇಳಿಕೆ ನೀಡಿ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಕೆಲವು ಸ್ಟಾರ್ ನಟರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನವರಸನಾಯಕ ಜಗ್ಗೇಶ‍್ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಒಂದೇ ಮಾತಿನಲ್ಲಿ ಪ್ರತಿಕ್ರಿಯೆ ನೀಡಿ ಮುಗಿಸುವೆ ಎಂದಿರುವ ಜಗ್ಗೇಶ್ ಇಂದಿನ ಕೆಲ ಸ್ವಪ್ರತಿಷ್ಠೆ ನಟರಿಗೆ ನಮ್ಮಂಥ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ. ನಾವು ಹೋದರೆ ಅಥವಾ ಸತ್ತರೆ ತಾವು ವಾರಸುದಾರರು ಎಂಬ ಕೆಟ್ಟ ಚಿಂತೆ ಇದೆ. ಕೆಲ ನಟರ ಅಡಿಯೋ ಸಂಭಾಷಣೆಯನ್ನು ಕೇಳಿಸಿದ್ದಾರೆ. ಹೀಗಿರಬೇಕಾದರೆ ಇಂದಿನ ಚಿಂತೆ. ಎಲ್ಲವನ್ನೂ ರಾಯರಿಗೆ ಒಪ್ಪಿಸಿ ಇರುವಷ್ಟು ದಿನ ದುಡಿಯುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.