Publish Date: Tue, 07 Mar 2023 (10:41 IST)
Updated Date: Tue, 07 Mar 2023 (10:42 IST)
ಬೆಂಗಳೂರು: ಎವರ್ ಗ್ರೀನ್ ನಟ ರಮೇಶ್ ಅರವಿಂದ್ ನಾಯಕರಾಗಿರುವ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
ರಮೇಶ್ ಅರವಿಂದ್ ನಾಯಕರಾಗಿ ಸಸ್ಪೆನ್ಸ್ ಥ್ರಿಲ್ಲರ್ ಕತೆ ಹೊಂದಿದ್ದ ಶಿವಾಜಿ ಸುರತ್ಕಲ್ ಭಾಗ 1 ಭಾರೀ ಹಿಟ್ ಆಗಿತ್ತು. ಕೊರೋನಾಗಿಂತ ಕೆಲವೇ ಸಮಯದ ಮೊದಲು ಸಿನಿಮಾ ಅಂದು ಬಿಡುಗಡೆಯಾಗಿತ್ತು.
ಇದೇ ಕಾರಣಕ್ಕೆ ಚಿತ್ರತಂಡ ಎರಡನೇ ಭಾಗದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಏಪ್ರಿಲ್ 14 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಆಕಾಶ್ ಶ್ರೀವತ್ಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಮೇಶ್ ಜೊತೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ ಸೇರಿದಂತೆ ಅನೇಕರು ಪಾತ್ರ ಮಾಡಿದ್ದಾರೆ.