Select Your Language

Notifications

webdunia
webdunia
webdunia
webdunia

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಇಂದು ಕರ್ನಾಟಕ ವರ್ಸಸ್ ಚೆನ್ನೈ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಇಂದು ಕರ್ನಾಟಕ ವರ್ಸಸ್ ಚೆನ್ನೈ
ಬೆಂಗಳೂರು , ಶನಿವಾರ, 4 ಮಾರ್ಚ್ 2023 (08:50 IST)
Photo Courtesy: Twitter
ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಇಂದು ಕಿಚ್ಚ ಸುದೀಪ್ ರ ಕರ್ನಾಟಕ ಬುಲ್ಡೋಜರ್ಸ್ ಮೂರನೇ ಪಂದ್ಯವಾಡಲಿದ್ದು, ಚೆನ್ನೈ ವಿರುದ್ಧ ಪಂದ್ಯವಾಡಲಿದೆ.

ಕಿಚ್ಚನ ತಂಡ ಈಗಾಗಲೇ ಸತತ ಎರಡು ಗೆಲುವು ಕಂಡಿದೆ. ಇಂದು ತವರಿನ ಅಂಗಳದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.

ಐಪಿಎಲ್ ನಂತೇ ಸಿಸಿಎಲ್ ನಲ್ಲೂ ಕರ್ನಾಟಕ ಮತ್ತು ಚೆನ್ನೈ ಪಂದ್ಯವೆಂದರೆ ಜಿದ್ದಾಜಿದ್ದಿನ ಹೋರಾಟದ ಇತಿಹಾಸವಿದೆ. ಈ ಮೊದಲಿನ ಆವೃತ್ತಿಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಭಾರೀ ರೋಚಕ ಪಂದ್ಯಗಳು ನಡೆದಿದ್ದವು. ಹೀಗಾಗಿ ಈ ಪಂದ್ಯವೂ ಅದೇ ರೀತಿ ನಡೆಯಬಹುದು ಎಂಬ ನಿರೀಕ್ಷೆಯಿದೆ. ಕಿಚ್ಚನ ತಂಡದಲ್ಲಿ ರಾಜೀವ್, ಜಯರಾಮ್ ಕಾರ್ತಿಕ್, ನಾಯಕ ಪ್ರದೀಪ್ ಪ್ರಮುಖ ಆಟಗಾರರಾಗಿದ್ದಾರೆ. ಅತ್ತ ಚೆನ್ನೈ ತಂಡದಲ್ಲಿ ನಟ ಆರ್ಯ, ಜೀವ, ಭರತ್ ಮುಂತಾದ ಪ್ರಮುಖ ತಾರೆಯರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ ಘೋಷಣೆ